ಹೊನ್ನಾವರ; ತಾಲೂಕಿನ ಖರ್ವಾ ಗ್ರಾ.ಪಂ ಪಂಚಾಯತ್ ಆವಾರದಲ್ಲಿ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ‘ಸಂಜೀವಿನಿ ಮಾಸಿಕ ಸಂತೆ’ ಹೆಸರಿನಲ್ಲಿ ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಸುನೀಲ್ ನಾಯ್ಕ ಮಾತನಾಡಿ, ಸಂಜೀವಿನಿ ಮಾಸಿಕ ಸಂತೆ’ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ’. ಇದು ಹಳ್ಳಿಯಲ್ಲಿ ಇರುವಂತ ಮಹಿಳೆಯರಿಗೆ ಶಕ್ತಿ ತುಂಬುವ ಯೋಜನೆಯಾಗಿದೆ.ಮಹಿಳೆಯ ಸ್ವಾವಲಂಬಿಯಾಗಿ ಬದುಕಲು ಶಕ್ತಳು, ನಮ್ಮ ಸರ್ಕಾರ ಮಹಿಳೆಯರ ಸ್ವಉದ್ಯೋಗಕ್ಕಾಗಿ ಸಬ್ಸಿಡಿ ಸಾಲ ಸೌಲಭ್ಯಗಳನ್ನು, ತರಬೇತಿಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ನಿಮಗೆ ಬೇಕಾದ ಸಹಾಯ ಸಹಕಾರ ಸದಾ ನೀಡಲು ಸಿದ್ಧನಿದ್ದೆನೆ ಎಂದರು.
ತಾಲೂಕಾ ಪಂಚಾಯತ ಕಾರ್ಯನಿರ್ವಣಾಧಿಕಾರಿ ಸುರೇಶ್ ನಾಯ್ಕ, ಗ್ರಾ.ಪಂ ಅಧ್ಯಕ್ಷೆ ಭವಾನಿ ಗೌಡ, ಉಪಾಧ್ಯಕ್ಷ ಶ್ರೀಧರ್ ನಾಯ್ಕ,ಸದಸ್ಯರಾದ ಸಂತೋಷ ನಾಯ್ಕ,ಇಬ್ರಾಹಿಂ,ರಾಮಾ ಗೌಡ,ತಾಲೂಕಾ ಪಂಚಾಯತನ ಸಿಬ್ಬಂದಿ ಬಾಲಚಂದ್ರ ನಾಯ್ಕ ಮತ್ತಿತರಿದ್ದರು.
‘ಸಂಜೀವಿನಿ ಮಾಸಿಕ ಸಂತೆ’ಗೆ ಹಪ್ಪಳ, ಉಪ್ಪಿನಕಾಯಿ, ವಿವಿಧ ಬಗೆಯ ತರಕಾರಿ, ಬಟ್ಟೆ, ವಿವಿಧ ಬಗೆಯ ತಿಂಡಿತಿನಿಸುಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಜರುಗಿದ್ದು, ಸಾರ್ವಜನಿಕರು ಹಾಗೂ ಅಧಿಕಾರಿಗಳು ಸಂತಸದಿಂದ ವಸ್ತುಗಳನ್ನು ಖರೀದಿಸಿದರು. ತಾಲೂಕ ಪಂಚಾಯತಿ ಸೂಕ್ತ ರೀತಿಯಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿತ್ತು.