• Slide
    Slide
    Slide
    previous arrow
    next arrow
  • ನೆರೆ ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಮನವಿ

    300x250 AD

    ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾ.ಪಂ ವ್ಯಾಪ್ತಿಯ ನೆರೆಪೀಡಿತ ಪ್ರದೇಶದ ಕುಟುಂಬಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಗ್ರಾ.ಪಂ. ಸದಸ್ಯ ಎಚ್.ಆರ್.ಗಣೇಶ ನೇತ್ರತ್ವದಲ್ಲಿ ಹೊಸಾಕುಳಿ ಗ್ರಾ.ಪಂ. ಮುಂಭಾಗದಲ್ಲಿ ತಹಶೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿದರು.
    ಗ್ರಾ.ಪಂ. ಆಯ್ಕೆಯಾದ ಜನಪ್ರತಿನಿಧಿಗಳ ಮೂಲಕ ಗ್ರಾಮದ ನೆರೆ ಪೀಡಿತ ಪ್ರದೇಶದವರು ಶಾಶ್ವತ ಸ್ಥಳಕ್ಕೆ ಒತ್ತಾಯಿಸಿದರು. ಗ್ರಾಮದ ಶಶಿಹಿತ್ಲ, ದೊಡ್ಡಹಿತ್ಲ, ಗೊಳಿಬೈಲು, ಭಾಸ್ಕೇರಿ. ಗಜನಕೇರಿ, ಮಡಿವಾಳಕೇರಿ, ಹೆಬ್ಬಾರ್ತಕೇರಿಯ 114 ಕುಟುಂಬಗಳು ಕಳೆದ 20 ವರ್ಷಗಳಿಂದಲೂ ನಿರಂತರವಾಗಿ ಭಾಸ್ಕೇರಿ ಹೊಳೆಯಿಂದ ನೆರೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಪ್ರವಾಹದಿಂದ ಜನರು ಹಾಗೂ ಜಾನುವಾರು ಸಂಕಷ್ಟ ಅನುಭವಿಸುವ ಜೊತೆ ಬೆಳೆ ಹಾನಿಯು ಸಂಭವಿಸುತ್ತಿದೆ. ಪ್ರತಿ ಬಾರಿಯೂ ಸರ್ಕಾರ ನೆರೆಬಂದಾಗ ಕಾಳಜಿ ಕೇಂದ್ರ ಹಾಗೂ ಒಂದಿಷ್ಟು ಪರಿಹಾರ ನೀಡುವ ಬದಲು ಇದಕ್ಕೆ ಶಾಶ್ವತವಾಗಿ ಗ್ರಾಮದ 169ಅ/1 ಸರ್ಕಾರಿ ಖರಾಬು 54-07 ಜಾಗವಿದ್ದು, ಇದರಲ್ಲಿ 10 ಎಕರೆಯಷ್ಟು ಜಾಗ ಫಾರೆಸ್ಟ ಖಾತೆಯಿಂದ ರೆವಿನ್ಯೂ ಖಾತೆಗೆ ಬಂದಿದೆ. ನೆರೆ ಬಾದಿತ ಪ್ರದೇಶದ 114 ಕುಟುಂಬಗಳಿಗೆ ತಲಾ 2 ಗುಂಟೆಯಂತೆ ಈ ಸ್ಥಳವನ್ನು ಮಂಜೂರು ಮಾಡಿ ಸರ್ಕಾರದ ಮನೆ ನಿರ್ಮಾಣ ಮಾಡಿದಲ್ಲಿ ಈ ಸಮಸ್ಯೆಗೆ ಶಾಸ್ವತ ಪರಿಹಾರ ಸಿಗಲಿದೆ. 114 ಕುಟುಂಬದಲ್ಲಿ 462 ಜನಸಂಖ್ಯೆ ಇದ್ದು, ಇವರೆಲ್ಲರಿಗೂ ಮಳೆಗಾಲದ ನೆರೆ ಸಮಸ್ಯೆಯಿಂದ ಮುಕ್ತಿ ದೊರೆಯಲಿದೆ ಆ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಶಾಸಕರು, ಸಚೀವರು ಮುಂದಾಗಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು, ಗ್ರಾ.ಪಂ. ಪ್ರತಿನಿಧಿಗಳ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
    ತಹಶೀಲ್ದಾರ ಪರವಾಗಿ ಗ್ರಾಮಲೆಕ್ಕಾಧಿಕಾರಿ ವಿನಯ ಪಂಡಿತ್ ಮನವಿ ಸ್ವೀಕರಿಸಿದರು. ಗ್ರಾ.ಪಂ. ಅಧ್ಯಕ್ಷೆ ಸುರೇಖಾ ನಾಯ್ಕ, ಉಪಾಧ್ಯಕ್ಷ ಕಿರಣ ಹೆಗಡೆ, ಸದಸ್ಯೆ ಮಾದೇವಿ ಮುಕ್ರಿ, ಕಮಲಾ ಮುಕ್ರಿ, ಪಿಡಿಓ ಬಾಲಕೃಷ್ಣ ನಾಯ್ಕ, ಗ್ರಾಮಸ್ಥ ಚಿದಂಬರ ನಾಯ್ಕ ಸೇರಿದಂತೆ ನೂರಾರು ಸಂಖ್ಯೆಯ ಸಾರ್ವಜನಿಕರು ಹಾಜರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top