• Slide
    Slide
    Slide
    previous arrow
    next arrow
  • ‘ಜನಸೇವೆಗಾಗಿ ನಾವು ನೀವು’ ಕಾರ್ಯಕ್ರಮ:ಯೋಜನೆಗಳ ಪ್ರಗತಿ ಶ್ಲಾಘಿಸಿದ ಸಚಿವ ಪೂಜಾರಿ

    300x250 AD

    ಹೊನ್ನಾವರ: ತಾಲೂಕಿನ ಗುಣವಂತೆಯ ಶ್ರೀಕೆರೆಮನೆ ಶಿವರಾಂ ಹೆಗಡೆ ಸಭಾಭವನದಲ್ಲಿ ನಡೆದ ‘ಜನಸೇವೆಗಾಗಿ ನಾವು ನೀವು’ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಿ ತಾಲೂಕಿನಲ್ಲಿ ನರೇಗಾ, ವಸತಿ, ಗ್ರಂಥಾಲಯ, ಸ್ವಚ್ಛ ಭಾರತ್ ಮಿಷನ್ ಯೋಜನೆಗಳ ಪ್ರಗತಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

    ಮಲೆನಾಡು- ಕರಾವಳಿಯ ವಿಶೇಷತೆಯನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆಯು ಶೇ ೭೦ರಷ್ಟು ಅರಣ್ಯ ಪ್ರದೇಶಗಳಿಂದ ಕೂಡಿದೆ. ಈ ವರ್ಷ ಭಾರಿ ಮಳೆಯಿಂದಾಗಿ ಹಲವು ಭಾಗಗಳಲ್ಲಿ ನೆರೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದ ಸಂದರ್ಭದಲ್ಲಿ ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಕಾಲದಲ್ಲಿ ಜನತೆಯ ಕಷ್ಟಗಳಿಗೆ ಸ್ಪಂದಿಸಿ, ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಭಟ್ಕಳ ಶಾಸಕ ಸುನೀಲ್ ನಾಯ್ಕರವರು ವಿಶೇಷ ಕಾಳಜಿ ವಹಿಸಿ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಹಕರಿಸಿದ್ದಾರೆ ಎಂದು ವಿಶೇಷವಾಗಿ ಶ್ಲಾಘಿಸಿದರು. ಅಲ್ಲದೇ, ತಾಲೂಕಿನ ಜನತೆಗೆ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಸಾಂಘಿಕ ಹೋರಾಟ ಮಾಡಲು ಅವರು ಕರೆ ನೀಡಿದರು.

    300x250 AD

    ಶಾಸಕ ಸುನೀಲ್ ನಾಯ್ಕ ನೇತೃತ್ವದಲ್ಲಿ ಬಳಕೂರ ಮತ್ತು ಮಾಗೋಡದಲ್ಲಿ ವಸತಿ ಯೋಜನೆಯ ಅರ್ಹ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಮತಾದೇವಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ನಾಯ್ಕ, ತಹಶೀಲ್ದಾರ ನಾಗರಾಜ ನಾಯ್ಕಡ್, ಗ್ರಾಮ ಪಂಚಾಯತಿ ಒಕ್ಕೂಟದ ಅಧ್ಯಕ್ಷ ಕೇಶವ ನಾಯ್ಕ ಬಳಕೂರ, ಕಾಸರಕೋಡ, ಕೆಳಗಿನೂರ, ಮಂಕಿ ಸಿ ಚಿತ್ತಾರ, ಅನಂತವಾಡಿ, ಮೇಲಿನ ಇಡಗುಂಜಿ, ಬಳಕೂರ, ಕೊಡಾಣಿ, ಮಾಗೋಡ, ಕುದ್ರಿಗಿ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top