Slide
Slide
Slide
previous arrow
next arrow

ನ್ಯಾಶನಲ್ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಸಾಧನೆ

300x250 AD

ಭಟ್ಕಳ: ವಾಕೋ ಇಂಡಿಯಾ ಚಿಲ್ಡ್ರನ್ಸ್, ಕೆಡೆಟ್ಸ್ ಎಂಡ್ ಜ್ಯೂನಿಯರ‍್ಸ್ ನ್ಯಾಶನಲ್ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡದ ಉತ್ತರ ಕನ್ನಡ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಪಶ್ಚಿಮ ಬಂಗಾಳದ ಕಲ್ಕತ್ತಾದ ಬೆಹಲಾದ ಈಸ್ಟರ್ನ್ ರೈಲ್ವೆ ಇಂದೋರ್ ಸ್ಟೇಡಿಯಂನಲ್ಲಿ ಜುಲೈ 19 ರಿಂದ 23ರವರೆಗೆ ಸ್ಪರ್ಧೆ ನಡೆದಿತ್ತು. ದೇಶದ ವಿವಿಧ ರಾಜ್ಯಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ಆದ್ಯ ಶೆಟ್ಟಿ 12 ವರ್ಷ ವಯೋಮಿತಿಯ ಬಾಲಕಿಯರ ಕ್ರಿಯೇಟಿವ್ ಫಾರ್ಮ್ ವೆಪನ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸಿ ವಾಕೊ ಚಿಲ್ಡ್ರನ್, ಕ್ಯಾಡೆಟ್ ಮತ್ತು ಜ್ಯೂನಿಯರ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್-2022 ಇಟಲಿಯಲ್ಲಿ ನಡೆಯುವ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

300x250 AD

ಹುಡುಗರ ವಿಭಾಗದಲ್ಲಿ ಮಣಿಪ್ರಸಾದ ಶೆಟ್ಟಿ ಬೆಳ್ಳಿಯ ಪದಕ ಗಳಿಸಿದ್ದಾನೆ. ಹುಡುಗಿಯರ ಒಂಬತ್ತು ವರ್ಷ ವಯೋಮಿತಿಯ ಪಾಯಿಂಟ್ ಫೈಟಿಂಗ್ ವಿಭಾಗದಲ್ಲಿ ಪ್ರಣವಿ ರಾಮಚಂದ್ರ ಕಿಣಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ಭಾಗವಹಿಸಿದ ಭಟ್ಕಳ ತಾಲೂಕಿನ ಕಿಕ್ ಬಾಕ್ಸಿಂಗ್ ಪಟುಗಳಾದ ರಿಷಿಮಾ ನಾಯ್ಕ, ಪ್ರಣವ ಮೊಗೇರ, ನಿಧಿ ನಾಯ್ಕ, ಸಿಂಧು ಅರೇರ್ 9 ನೇಯ ಸ್ಥಾನವನ್ನು ಪಡೆದಿದ್ದಾರೆ. ಈ ವಿದ್ಯಾರ್ಥಿಗಳು ಭಟ್ಕಳ ಶೋಟೋಕಾನ್ ಕರಾಟೆ ಇನ್ಸ್ಟಿಟ್ಯೂಟ್‌ನಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.

Share This
300x250 AD
300x250 AD
300x250 AD
Back to top