Slide
Slide
Slide
previous arrow
next arrow

ಕಸ್ತೂರಿ ರಂಗನ್ ವರದಿ ತಾತ್ಪೂರ್ತಿಕ ಪರಿಹಾರ ; ಜು.30ರ ಪ್ರತಿಭಟನೆ ಮುಂದಕ್ಕೆ

300x250 AD

ಶಿರಸಿ: ಕೇಂದ್ರ ಪರಿಸರ ಸೂಕ್ಷ್ಮ ಪ್ರದೇಶದ ಘೋಷಣೆಗೆ ಸಂಬಂಧಿಸಿ ವಸ್ತುಸ್ಥಿತಿ ಅಧ್ಯಯನಕ್ಕೆ ಉನ್ನತ ಮಟ್ಟದ ಸಮಿತಿ ರಚನೆ ಕುರಿತು ಘೋಷಣೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಜುಲೈ 30 ರಂದು ಶಿರಸಿಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಂಘಟಿಸಿದ ರ‍್ಯಾಲಿ ಮುಂದಕ್ಕೆ ಹಾಕಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಪರಿಸರ ಸೂಕ್ಷ್ಮ ಪ್ರದೇಶದ ಘೋಷಣೆಯ ವರದಿಯು ಅವೈಜ್ಞಾನಿಕವಾಗಿರುವ ಹಿನ್ನೆಲೆಯಲ್ಲಿ ಆರು ರಾಜ್ಯಗಳಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿರುವುದರಿಂದ, ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ನಿವೃತ್ತ ಅರಣ್ಯ ಅಧಿಕಾರಿ ಸಂಜಯ್ ಕುಮಾರ ನೇತೃತ್ವದ ಐದು ಸದಸ್ಯರ ತಂಡವನ್ನು ರಚಿಸಿ, ಪರಿಸರ ಸೂಕ್ಷ್ಮ ಪ್ರದೇಶದ ಸ್ಥಿತಿ-ಗತಿ ಅಧ್ಯಯನಕ್ಕೆ ಒಂದು ವರ್ಷ ಕಾಲಾವಧಿ ನಿಗದಿಗೊಳಿಸಿದ್ದಾರೆ. ಕೇಂದ್ರ ಸರಕಾರದ ಈ ನಿರ್ಧಾರವು ತಾತ್ಪೂರ್ತಿಕ ಪರಿಹಾರವಾಗಿದ್ದು ಇರುತ್ತದೆ.

ಭೌತಿಕ ಸಮೀಕ್ಷೆ, ವಾಸ್ತವಿಕ ಸ್ಥಿತಿ-ಗತಿ ಅಧ್ಯಯನಕ್ಕೆ ಹಾಗೂ ಸ್ಥಳ ಪರಿಶೀಲನೆ ಆಧಾರದ ಮೇಲೆ ಕಸ್ತೂರಿ ರಂಗನ್ ವರದಿಯ ವಾಸ್ತವಿಕತೆಯನ್ನು ಪರಿಶೀಲಿಸಬೇಕೆಂಬ ಒತ್ತಾಯಕ್ಕೆ ಕೇಂದ್ರ ಪರಿಸರ ಇಲಾಖೆ ಹೊಸ ಸಮಿತಿ ರಚಿಸಿದ್ದು ಸ್ವಾಗತಾರ್ಹವಾದರೂ, ಸೂಕ್ಷ್ಮ ಪ್ರದೇಶದ ಮಾನದಂಡ ಬೀಡಬೇಕೆಂಬ ಬೇಡಿಕೆಗೆ ಸಂಬಂಧಿಸಿ ಕಾನೂನಾತ್ಮಕ ಮತ್ತು ಸಂಘಟಿತ ಹೋರಾಟ ಮುಂದುವರೆಸಲಾಗುವುದು ಎಂದು ಅವರು ಹೇಳಿದರು.

300x250 AD

ಹೊಸ ಕಾನೂನಿಗೆ ವಿರೋಧ :ಅರಣ್ಯ ರಕ್ಷಣೆ, ಪೋಷಣೆ, ಸಂರಕ್ಷಣೆಗೆ ಈಗಲೇ ಸಾಕಷ್ಟು ಕಾನೂನುಗಳು ಜಾರಿಯಲ್ಲಿದ್ದು, ಅದರ ಪರಿವ್ಯಾಪ್ತಿಯಲ್ಲಿ ಪಶ್ಚಿಮ ಘಟ್ಟವು ಸೇರಲ್ಪಡುವುದರಿಂದ ಈ ದಿಶೆಯಲ್ಲಿ ಹೊಸ ನೀತಿ, ನಿಯಮ, ಕಾನೂನು ಅವಶ್ಯಕತೆಯಿಲ್ಲ. ಹೊಸ ಪ್ರಯೋಗದ ಮೂಲಕ ಹೊಸ ನೀತಿ, ನಿಯಮ, ಕಾನೂನು ಜಾರಿಗೆ ತರಲು ಪ್ರಯತ್ನಿಸಿದ್ದಲ್ಲಿ ಈ ಭಾಗದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಎಂದು ರವೀಂದ್ರ ನಾಯ್ಕ ಹೇಳಿದ್ದಾರೆ.

Share This
300x250 AD
300x250 AD
300x250 AD
Back to top