Slide
Slide
Slide
previous arrow
next arrow

ವೃಕ್ಷಲಕ್ಷ ತಂಡದಿಂದ ಡೀಮ್ಡ ಅರಣ್ಯ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲು ಮನವಿ

300x250 AD

ಶಿರಸಿ: ವೃಕ್ಷ ಲಕ್ಷ ಆಂದೋಲನ ತಂಡವು ಜು.22ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಡೀಮ್ಡ ಅರಣ್ಯ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲು ಮನವಿ ಮಾಡಿತು. ಅರಣ್ಯ ಸಚಿವ ಉಮೇಶ ಕತ್ತಿ, ಮುಖ್ಯ ಕಾರ್ಯದರ್ಶಿ ವಂದಿತಾ ರ‍್ಮಾ ಅರಣ್ಯ ಪರಿಸರ ಇಲಾಖೆಯ ಅಪರ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಕೇಂಧ್ರ ಅರಣ್ಯ ಮಂತ್ರಾಲಯದ ದಕ್ಷಿಣ ಭಾರತ ಕಛೇರಿ ಮುಖ್ಯ ಸ್ಥ ಡಾ|| ಕೆ.ಪಿಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಎಂದು ಜೀವ ವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಅಶೀಸರ ತಿಳಿಸಿದ್ದಾರೆ.

ಈಗ ರಾಜ್ಯ ಸರ್ಕಾರ ಘೋಷಣೆ ಮಾಡಿರುವ 330186 ಹೆಕ್ಟೇರ್ ಡೀಮ್ಡ್ ಅರಣ್ಯ ಸಂರಕ್ಷಣೆ ಮಾಡಲು ತಳಮಟ್ಟದಲ್ಲಿ ಕ್ರಿಯಾ ಯೋಜನೆಗಳನ್ನು ಸಿದ್ದಪಡಿಸಬೇಕು. ಕಂದಾಯ ಇಲಾಖೆ ಸಹಖಾರ ಪಡೆದು ಡೀಮ್ಡ್ ಅರಣ್ಯ ಗುರುತಿಸಬೇಕು ಬೇಲಿ, ಕಂದಕ ನಿರ್ಮಿಸಬೇಕು ಮಲೆನಾಡು ದಟ್ಟ ಕಾನುಗಳನ್ನು ರಕ್ಷಿಸಲು ವನೀಕರಣ ಕೈಗೊಳ್ಳಲು ಬೃಹತ್ ಯೋಜನೆ ರೂಪಿಸಭೇಕು ಎಂದು ಡಾ|| ಟಿ.ವಿ. ರಾಮಚಂದ್ರ, ಡಾ|| ಕೇಶವ ಕೊರ್ಸೆ, ಡಾ|| ರಾಮಕೃಷ್ಣ, ಪ್ರೋ|| ಬಿ. ಎಂ. ಕುಮಾರ ಸ್ವಾಮಿ, ಡಾ|| ಪ್ರಕಾಶ ಮೇಸ್ತ, ಡಾ|| ಬಾಲಚಂದ್ರ ಸಾಯಿಮನೆ, ಕೆ. ವೆಂಕಟೇಶ, ಶ್ರೀಪಾದ ಬಿಚ್ಚುಗುತ್ತಿ ಮುಂತಾದ ಪರಿಸರ ಅರಣ್ಯ ತಜ್ಞರು ಒತ್ತಾಯಿಸಿದ್ದಾರೆ.

ಹಿನ್ನೆಲೆ : ಡೀಮ್ಡ ಅರಣ್ಯ ಆದೇಶ ತಮ್ಮ ಗಮನವನ್ನು ಕರ್ನಾಟಕ ಡೀಮ್ಡ ಅರಣ್ಯ ಪ್ರದೇಶಗಳ ಸಂರಕ್ಷಣೆ & ಅಭಿವೃದ್ಧಿ ಬಗ್ಗೆ ಸೆಳೆಯುತ್ತಿದ್ದೇವೆ. ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಆದೇಶದಂತೆ (ಅಪಜೀ 185 ಎಫ್.ಎ.ಎ.ಎಫ್ 2011 ದಿನಾಂಕ : 05/05/2022) 330186 ಹೆಕ್ಟೇರ್ ಪ್ರದೇಶಗಳನ್ನು ಡೀಮ್ಡ ಫಾರೆಸ್ಟ (ಪರಿಭಾವಿತ ಅರಣ್ಯ ಪ್ರದೇಶಗಳು) ಎಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಈ ಆದೇಶದಲ್ಲೇ ಹೇಳಿರುವಂತೆ ಡೀಮ್ಡ ಅರಣ್ಯಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ.
ಸರ್ಕಾರ ಈ ಬಗ್ಗೆ ಸುಪ್ರೀಂಕೋರ್ಟಗೆ ಅಫಿಡವಿಟ್ ಕೂಡಾ ಸಲ್ಲಿಸಿದೆ ಎಂದು ಇದೇ ಆದೇಶ ಹೇಳಿದೆ. ಸುಪ್ರಿಂ ಕೋರ್ಟಗೆ ಅಫಿಡವೀಟ್ ಸಲ್ಲಿಸಿರುವುದರಿಂದ ಅರಣ್ಯ ಕಾಯಿದೆಯ ಅಡಿಯಲ್ಲಿ ಈ ಡೀಮ್ಡ್ ಅರಣ್ಯಗಳ ರಕ್ಷಣೆಗೆ ಸರ್ಕಾರ ಕಡ್ಡಾಯವಾಗಿ ಮುಂದಾಗಲೇಬೇಕಾದ ಪರಿಸ್ಥಿತಿ ಇದೆ ಎಂಬುದನ್ನು ಪರಿಸರ ಕಾರ್ಯಕರ್ತರು ಎತ್ತಿ ಹೇಳಿದ್ದಾರೆ.

ಈ ಹಿಂದಿನ ತಜ್ಞರ ಸಮಿತಿ ವರದಿಯಲ್ಲಿ 994881 ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶ ಎಂದು ಗುರುತಿಸಿತ್ತು. ರಾಜ್ಯ ಸರ್ಕಾರದ ಪುನರ‍್ರಚಿತ ತಜ್ಞರ ಸಮಿತಿ ಡೀಮ್ಡ್ ಮಾನದಂಡ ಅನ್ವಯಿಸದ 773 326 ಹೆಕ್ಟೇರ್‌ಗಳನ್ನು ಕೈ ಬಿಟ್ಟಿತು. ಕೇವಲ 330186 ಹೆಕ್ಟೇರ್ ಡೀಮ್ಡ್ ಅರಣ್ಯ ಎಂದು ಈಗ ಘೋಷಿಸಲಾಗಿದೆ. ಕಳೆದ 20 ವರ್ಷಗಳಲ್ಲಿ ಹಲವು ಬಾರಿ ಪರಿಶೀಲನೆಗೆ ಒಳಗಾಗಿ ಉಳಿದುಕೊಂಡ ಕೇವಲ 33% ಡೀಮ್ಡ್ ಅರಣ್ಯ ಪ್ರದೇಶವನ್ನು ಉಳಿಸಿಕೊಳ್ಳಲೇಬೇಕಾದ ಗುರುತರ ಜವಾಬ್ದಾರಿ ಸರ್ಕಾರದ್ದಿದೆ ಎಂದು ಗಮನ ಸೆಳೆಯಲಾಗಿದೆ.


ಇನ್ನಷ್ಟು ವಿವರ: ಡೀಮ್ಡ ಅರಣ್ಯ ಸಂರಕ್ಷಣೆ ಅಭಿವೃದ್ಧಿ ಜವಾಬ್ದಾರಿ ಅರಣ್ಯ ಇಲಾಖೆಗೆ ನೀಡಿ : ಇದೀಗ 330186 ಹೆಕ್ಟೇರ್ ಡೀಮ್ಡ ಅರಣ್ಯಗಳನ್ನು ತಳಮಟ್ಟದಲ್ಲಿ ಜತನವಾಗಿ ಕಾಪಾಡಬೇಕಾದ ಗುರುತರ ಜವಾಬ್ದಾರಿ ಸರ್ಕಾರದ್ದಾಗಿದೆ ಹಾಗೂ ಸ್ಥಳೀಯ ಜನರದ್ದಾಗಿದೆ. ಸರ್ಕಾರ ರಾಜ್ಯ ಅರಣ್ಯ ಇಲಾಖೆಗೆ ಡೀಮ್ಡ ಅರಣ್ಯಗಳ ರಕ್ಷಣೆಯ ನೇರ ಹೊಣೆಯನ್ನು ವಹಿಸಬೇಕು. ಕಂದಾಯ ಇಲಾಖೆ ಪೂರ್ಣ ಸಹಕಾರ ನೀಡಬೇಕು ಇದು ಅತ್ಯವಶ್ಯ ಎಂದು ಸಲಹೆ ನೀಡಲಾಗಿದೆ.

300x250 AD

ಯೋಜನೆ ರೂಪಿಸಿ : ಗ್ರಾಮ ಅರಣ್ಯ ಸಮಿತಿ ರಚನೆಗಳ ಮೂಲಕ ಈ ಅರಣ್ಯ ಅಭಿವೃದ್ಧಿಯಲ್ಲಿ ಗ್ರಾಮ ಜನರ ಸಹಭಾಗಿತ್ವ ಪಡೆಯಬೇಕು. ಸ್ಥಳಿಯ ಪಂಚಾಯತ ಜೀವ ವೈವಿಧ್ಯ ಸಮಿತಿಗಳ ಸಹಕಾರ ಪಡೆಯಬೇಕು. ಡೀಮ್ಡ ಅರಣ್ಯ ಪ್ರದೇಶಗಳ ಜೀವ ವೈವಿಧ್ಯ ದಾಖಲಾತಿ, ಡೀಮ್ಡ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕೆರೆ -ಹಳ್ಳಗಳು, ಜಲ ಮೂಲಗಳ ರಕ್ಷಣೆ ಹೀಗೆ ಹಲವು ಮುಖಗಳಲ್ಲಿ ಡೀಮ್ಡ ಅರಣ್ಯ ಅಭಿವೃದ್ಧಿಗಾಗಿ ಬಹುದೊಡ್ಡ ಯೋಜನೆ ರೂಪಿಸಬೇಕು ಎಂದು ನಾಡಿನ ಜನತೆ ಪರವಾಗಿ ಮನವಿ ಮಾಡಲಾಗಿದೆ.

ಪಶ್ಚಿಮ ಘಟ್ಟದ ಡೀಮ್ಡ ಅರಣ್ಯ ಸೂಕ್ಷ್ಮವಾಗಿದೆ : ರಾಜ್ಯದ ಪಶ್ಚಿಮ ಘಟ್ಟದ ಜಿಲ್ಲೆಗಳ ಡೀಮ್ಡ ಅರಣ್ಯ ಪ್ರದೇಶಗಳಿಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕು. ಯಾಕೆಂದರೆ ಇಲ್ಲಿರುವ ಡೀಮ್ಡ ಅರಣ್ಯಗಳು ದಟ್ಟ ಕಾನುಗಳು, ದೇವರ ಕಾಡುಗಳು, ಪಾರಂಪರಿಕವಾಗಿ ಸ್ಥಳೀಯ ಜನರು ಗ್ರಾಮ ಸಾಮೂಹಿಕ ನೈಸರ್ಗಿಕ ಭೂಮಿ ಎಂದು ರಕ್ಷಿಸಿಕೊಂಡು ಬಂದಿದ್ದಾರೆ. ಇಲ್ಲಿ ವಿನಾಶದ ಅಂಚಿನ ಸಸ್ಯ ಪ್ರಭೇದಗಳಿವೆ. ವನ್ಯಜೀವಿಗಳಿವೆ. ರಾಂಪತ್ರೆ ಜಡ್ಡಿಗಳಿವೆ, ಜೇನು ಕಾಡುಗಳಿವೆ.ಶಿವಮೊಗ್ಗ, ಚಿಕ್ಕಮಗಳೂರು, ದ.ಕ., ಉಡುಪಿ, ಉ.ಕ., ಬೆಳಗಾವಿ, ಹಾಸನ, ಚಾಮರಾಜನಗರ ಜಿಲ್ಲೆ ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ಒಟ್ಟೂ 165905 ಹೆಕ್ಟೇರ್ ಡೀಮ್ಡ ಅರಣ್ಯ ಪ್ರದೇಶಗಳಿವೆ. (05/05/2022 ರ ಆದೇಶದಂತೆ) ಆದ್ದರಿಂದ ಈ ಜಿಲ್ಲೆಗಳಲ್ಲಿ ಈ ವರ್ಷವೇ ಡೀಮ್ಡ ಅರಣ್ಯ ಅಭಿವೃದ್ಧಿಗೆ ತಯಾರಿ ಶುರುವಾಗಬೇಕು. ಎಂದು ಒತ್ತಾಯಿಸಲಾಗಿದೆ.

ಉನ್ನತಮಟ್ಟದ ಸಭೆ ಏರ್ಪಡಿಸಿ : ತಮ್ಮ ಅಧ್ಯಕ್ಷತೆಯಲ್ಲಿ ಈ ಮೇಲಿನ ಡೀಮ್ಡ ಅರಣ್ಯ ಅಭಿವೃದ್ಧಿ ಸಮಾಲೊಚನಾ ಸಭೆ ಏರ್ಪಡಿಸಬೇಕು ಎಂದು ಸೂಚಿಸಲಾಗಿದೆ. ನವೆಂಬರ ಒಂದರ ರ ರಾಜ್ಯೋತ್ಸವ ದಿನದಂದು ಯೋಜನೆಗೆ ನೇರ ಚಾಲನೆ ಸಿಗುವಂತೆ ವ್ಯಾಪಕ ತಯಾರಿ ನಡೆಸಲು ಕಾರ್ಯಪಡೆ ರಚಿಸಬೇಕು ಎಂದು ಸಲಹೆ ನೀಡಲಾಗಿದೆ.

ದೇಶಕ್ಕೆ ಮಾದರಿ : 3.30 ಲಕ್ಷ ಹೆಕ್ಟೇರ ಡೀಮ್ಡ್ ಅರಣ್ಯ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ರಾಜ್ಯದ ಸುಸ್ಥಿರ ಅಭಿವೃದ್ಧಿ ನಿಸರ್ಗ ಸಂಪತ್ತಿನ ಉಳಿವಿಗೆ ದೇಶದಲ್ಲೇ ಮಾದರಿ ಎನ್ನಬಹುದಾದ ಡೀಮ್ಡ್ ಅರಣ್ಯ ಅಭಿವೃದ್ಧಿ ಯೋಜನೆ ರೂಪಿಸಿ ಜಾರಿಮಾಡಲು ತಾವು ಮುಂದಾಗಬೇಕು ಎಂದು ಮನವಿ ಮಾಡಲಾಗಿದೆ.

Share This
300x250 AD
300x250 AD
300x250 AD
Back to top