ಯಲ್ಲಾಪುರ: ತಾಲೂಕಿನಇಡಗುಂದಿಯ ಸ್ನೇಹ ಸಾಗರ ವಸತಿ ಶಾಲೆಯಲ್ಲಿ ಚಂದ್ರಶೇಖರ ಆಜಾದ್ ಭಾವಚಿತ್ರಕ್ಕೆ ದೀಪ ಬೆಳಗಿ, ಪುಷ್ಪಾರ್ಚನೆ ಮಾಡುವ ಮುಖೇನ 116 ನೇ ಜನ್ಮದಿನದ ಸಂಭ್ರಮವನ್ನುಆಚರಿಸಲಾಯಿತು.
ಶೌರ್ಯದಿಂದ ಬ್ರಿಟೀಷರ ವಿರುದ್ಧ ಹೋರಾಡಿ ತಮ್ಮ 25ನೇ ವಯಸ್ಸಿನಲ್ಲಿ ಹುತಾತ್ಮರಾದ ಆಜಾದ್ ಅವರು ಅಸಂಖ್ಯಾತ ಭಾರತೀಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಎಸ್. ಎಲ್. ಭಟ್ ಹೇಳಿದರು.
ವಿದ್ಯಾರ್ಥಿಗಳು ಸ್ವಾತಂತ್ರ್ಯ ಸೇನಾನಿಗಳ ಜೀವನ ಚರಿತ್ರೆ ಮತ್ತು ವಿಚಾರಧಾರೆಗಳ ಕುರಿತ ಪುಸ್ತಕಗಳನ್ನು ಅಭ್ಯಯಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಆ ನಿಟ್ಟಿನಲ್ಲಿಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಮಕ್ಕಳಿಗೆ ಗಾಂಧೀಜಿ ಜೀವನ ಚರಿತ್ರೆಯನ್ನುಅರಿವು ಮೂಡಿಸಲು ಪಾಪುಗಾಂದಿ ಗಾಂಧೀಬಾಪು ಎಂಬ ಪುಸ್ತಕದ ಅಧ್ಯಯನ ಮತ್ತು ಲಿಖಿತ ಪರಿಕ್ಷೆಯನ್ನು ನಡೆಸಿ ಬಹುಮಾನ ನೀಡುವುದಾಗಿ ಹೇಳಿದರು.
ಆಜಾದ್ ಅವರ ಜನ್ಮದಿನಾಚರಣೆಯಂದು ವಿದ್ಯಾರ್ಥಿಗಳು ಸಂಗ್ರಹಿಸಿದ ಸೈನಿಕ ನಿಧಿಯನ್ನುಎಸ್. ಎಲ್. ಭಟ್‌ರವರಿಗೆ ಹಸ್ತಾಂತರಿಸಿದರು. ವಿದ್ಯಾರ್ಥಿನಿ ಭಾಗ್ಯಲಕ್ಷ್ಮಿ ತಲವಾರ್ ಅಜಾದ್‌ರವರ ಜೀವನಗಾಥೆಯನ್ನು ವಿವರಿಸಿದಳು. ಶಿಕ್ಷಕಿ ವೀಣಾ ಬಿ ಆಜಾದ್ ಮತ್ತು ದೇಶ ಪ್ರೇಮದ ಕುರಿತು ವಿಷಯವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯಆಡಳಿತಾಧಿಕಾರಿ ಎನ್ ಎ ಭಟ್ ಮುಖ್ಯಾಧ್ಯಾಪಕ ಗುರುದತ್ ಎಸ್., ಶಿಕ್ಷಕರು, ಶಿಕ್ಷಕೇತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ತೇಜಸ್ ನಿರೂಪಿಸಿ, ಮಹೇಶ ಜಿ ಸ್ವಾಗತಿಸಿ, ರೋಹನ್ ಶಿ. ವಂದಿಸಿದರು.