Slide
Slide
Slide
previous arrow
next arrow

ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

300x250 AD

ಸಿದ್ದಾಪುರ: ಪಟ್ಟಣದ ಸಿದ್ಧಿವಿನಾಯಕ ಬಾಲಕಿಯರ ಪ್ರೌಢಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ, ವಿದ್ಯಾರ್ಥಿ ಸಂಸತ್ತು ಉದ್ಘಾಟನೆ, ವಿವಿಧ ಸಂಘಗಳ ಉದ್ಘಾಟನೆ ವಿಜ್ರಂಭಣೆಯಿಂದ ನೆರವೇರಿತು.

ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ಹಿರಿಯ ವಕೀಲ ಎ.ಪಿ.ಭಟ್ ಮುತ್ತಿಗೆ, ಸಂಸ್ಥಾಪಕ ಗಣೇಶ್ ಹೆಗಡೆ ದೊಡ್ಮನೆಯವರ ಸಾಧನೆಯ ಕುರಿತು ತಿಳಿಸುತ್ತಾ, ಅವರು ನಡೆಸಿದ ಶೈಕ್ಷಣಿಕ ಕ್ರಾಂತಿಯ ಕುರಿತು ವರ್ಣಿಸಿದರು. ದಾನಿಗಳಾದ ರಾಜೇಂದ್ರ ಹೆಗಡೆ ಮೈಸೂರು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕಿ ನಯನಾ ನಾಯಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

300x250 AD

ಶಿಕ್ಷಕರಾದ ಕೃಷ್ಣಮೂರ್ತಿ ಹೆಗಡೆ ಸ್ವಾಗತಿಸಿ ಪರಿಚಯಿಸಿದರು. ಸುಮಂಗಲಾ ಭಾಗ್ವತ್ ವಿವಿಧ ಸಂಘಗಳ ಕುರಿತು ಪರಿಚಯಿಸಿದರು. ಪ್ರಕಾಶ್ ಹಿತ್ತಲಕೊಪ್ಪ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ರಮೇಶ್ ನಾಯ್ಕ ವಂದಿಸಿದರು. ಮಂಜುಳಾ ಎಂ.ವಿ ಕಾರ್ಯಕ್ರಮ ನಿರೂಪಿಸಿದರು.

Share This
300x250 AD
300x250 AD
300x250 AD
Back to top