• Slide
    Slide
    Slide
    previous arrow
    next arrow
  • ಮೂಲಭೂತ ಸೌಕರ್ಯ ವಂಚಿತ ಬೆರಡೆ ಗ್ರಾಮ:ಗ್ರಾಮಸ್ಥರ ಕೂಗು ಕೇಳುವವರಾರು?

    300x250 AD

    ಅಂಕೋಲಾ: ಹಟ್ಟಿಕೇರಿ ಗ್ರಾ. ಪಂ. ವ್ಯಾಪ್ತಿಯ ಬೆರಡೆ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳಿಲ್ಲದೆ ಅಲ್ಲಿಯ ನಾಗರಿಕರು ಸಂಕಷ್ಟ ಅನುಭವಿಸುತ್ತಿದ್ದು, ತಮಗೆ ರಸ್ತೆ ಸಂಪರ್ಕವನ್ನು ಒದಗಿಸಿ ಮಾನವೀಯತೆ ಮೆರೆಯಿರಿ ಎಂದು ಬೆರಡೆ ಸುತ್ತಮುತ್ತಲಿನ ಗ್ರಾಮಸ್ಥರು ಸಭೆ ಸೇರಿ ಸಾಮಾಜಿಕ ಕಾರ್ಯಕರ್ತ ಸುರೇಶ ನಾಯಕ ಅಲಗೇರಿ ಮತ್ತು ಅಲ್ಲಿಯ ಹಾಲಕ್ಕಿ ಸಮಾಜದ ಪ್ರಮುಖರ ಮುಂದಾಳತ್ವದಲ್ಲಿ ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಮನವಿ ಅರ್ಪಿಸುತ್ತೇವೆ ಎಂದು ಅಲ್ಲಿಯ ಗ್ರಾಮಸ್ಥರು ಶ್ರೀ ಬೊಮ್ಮಯ್ಯ ಬೀರ ದೇಗುಲದಲ್ಲಿ ನಿರ್ಣಯ ಕೈಗೊಂಡರು.

    ಶ್ರೀ ಬೊಮ್ಮಯ್ಯ ಬೀರ ದೇವ ದೇಗುಲದ ಪೂಜಾಕಾರ್ಯಕ್ರಮದಲ್ಲಿ ಸಹಸ್ರಾರು ಜನರು ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿ, ಹರಕೆ ಸಮರ್ಪಿಸಿ ಗ್ರಾಮದ ಪ್ರಮುಖ ನಿವೃತ್ತ ಹೆಸ್ಕಾಂ ಇಂಜಿನೀಯರ ರಾಮಕೃಷ್ಣಗುನಗಾ ಮಾತನಾಡಿ, ಬೆರಡೆ ಗ್ರಾಮಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿ 2000 ಎಕರೆಗಳಷ್ಟು ಕೃಷಿ ಭೂಮಿ ಇದ್ದು, ದೇಶದ ರಕ್ಷಣೆಗೋಸ್ಕರ ಸೀಬರ್ಡ ಯೋಜನೆಗೆ ಸರಿಸುಮಾರು 1000 ಎಕರೆಗಳಷ್ಟು ಭೂಮಿ ಹೋದರು, ಇನ್ನು ಸಾವಿರ ಎಕರೆಗಳಷ್ಟು ಕೃಷಿ ಭೂಮಿ ಇಲ್ಲಿದ್ದು, ದಿನಕ್ಕೆ 300 ರಷ್ಟು ರೈತರು ಬೇರೆ ಬೇರೆ ಗ್ರಾಮಗಳಿಂದ ಕಾಲ್ನಡಿಗೆಯಲ್ಲಿಯೇ ಕೃಷಿ ಮಾಡಲು ಬೆರಡೆಗೆ ಬರುವ ಸ್ಥಿತಿ ಇದೆ. ನಮ್ಮ ಈ ಗ್ರಾಮದ ನಾಗರಿಕರ ಬಹುದಿನದ ಬೇಡಿಕೆಯಾದ ರಸ್ತೆ ವ್ಯವಸ್ಥೆಯನ್ನು ಸಂಬಂಧಪಟ್ಟ ವ್ಯವಸ್ಥೆ ಮಾಡಿಕೊಡುವಂತಾಗಬೇಕು. ನಾವು ನಮ್ಮ ಕೂಗನ್ನು ಸಂಬಂಧಪಟ್ಟವರಿಗೆ ತಲುಪಿಸಬೇಕೆಂದರೆ ಚುನಾವಣಾ ಬಹಿಷ್ಕಾರ ಅನಿವಾರ್ಯ. ಅದಕ್ಕೂ ಮುಂಚಿತವಾಗಿ ನಮ್ಮ ನಾಯಕರಾಗಿರುವ ಸುರೇಶ ನಾಯಕ ಅಲಗೇರಿರವರ ಮುಂದಾಳತ್ವದಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ನಮ್ಮಗ್ರಾಮಕ್ಕೆ ಬಂದು ಈ ಪರಿಸ್ಥಿತಿಯನ್ನು ವಿಚಾರಿಸಲು ತಿಳಿಸಲಾಗುವುದು ಎಂದರು. ಪ್ರಮುಖರಾದ ಬೆಚ್ಚು ದೇವು ಗೌಡ ಮಾತನಾಡಿ, ನಮ್ಮಹೊಟ್ಟೆ ತುಂಬಿಸಿಕೊಳ್ಳುವ ಈ ಪುಣ್ಯ ನೆಲದಲ್ಲಿ ನಾವು ಬೆಳೆದ ಭತ್ತವನ್ನು ಪಟ್ಟಣಕ್ಕೆ ಒಯ್ಯುವಾಗ ತಲೆಯ ಮೇಲೆ ಹೊತ್ತು ಸಾಗಬೇಕಾಗುತ್ತದೆ.ನಮ್ಮ ಊರಿಗೆ ಬೇರೆ ಏನನ್ನು ನೀಡಿ ಎಂದು ಹೇಳುವುದಿಲ್ಲ. ನಮಗೆ ರಸ್ತೆ ಸಂಪರ್ಕ ಒದಗಿಸಿ ಕೊಡದಿದ್ದಲ್ಲಿ ನಾವೆಲ್ಲರೂ ಒಂದಾಗಿ ಹೋರಾಟಕ್ಕಿಳಿಯುತ್ತೇವೆ.ನಮಗೆ ಮಾರ್ಗದರ್ಶಕರಾಗಿ ಮೊದಲು ಇದೇ ಗ್ರಾಮದವರಾದ ಈಗಲೂ ಇಲ್ಲಿಯ ಜಮೀನನ್ನು ಹೊಂದಿರುವ ಸುರೇಶ ನಾಯಕರ ಮುಖಾಂತರ ಸಂಬಂಧಿಸಿದ ನಾಯಕರ ಕಣ್ಣು ತೆರೆಸುವ ಪ್ರಯತ್ನ ಮಾಡಲಾಗುವುದು. ನಾವು ಹಲವಾರು ಭಾರಿ ವಿನಂತಿಸಿದರೂ ಈವರೆಗೂ ಯಾರೊಬ್ಬರೂ ನಮ್ಮ ಗ್ರಾಮದ ಅಭಿವೃದ್ಧಿಯ ಕುರಿತು ಕಾಳಜಿವಹಿಸದೆ ಇರುವುದು ದುರ್ದೈವ ಎಂದರು.

    300x250 AD

    ಪ್ರಮುಖರಾದ ಕರಿಯಾ ಗೌಡ, ಸುಕ್ರು ಗೌಡ, ಸಣ್ಣಪ್ಪ ಈ ಗ್ರಾಮದ ನಾಯ್ಕ, ವಾಮನ ನಾಯ್ಕ, ವ್ಯದ ಮನೆ ತಾರಾನಾಥ ಗಾಂವಕರ, ಪ್ರಕಾಶ ಗಾಂವಕರ, ಈಶ್ವರ ಪಡ್ತಿ, ಸುಭಾಷ ಪಡ್ತಿ, ಅನಿಲ ಪಡ್ತಿ, ಬೊಳಾ ಗೌಡ, ಅರ್ಚಕ ಮಹೇಶ ಗುನಗಾ ಸಾಕ್ಷಿತ್ ನಾಯಕ ಸೇರಿದಂತೆ ಸಹಸ್ರಾರು ಭಕ್ತರು ಶ್ರೀ ದೇವರ ಪೂಜಾಕಾರ್ಯದಲ್ಲಿ ಪಾಲ್ಗೊಂಡಿದ್ದರು

    Share This
    300x250 AD
    300x250 AD
    300x250 AD
    Leaderboard Ad
    Back to top