• Slide
    Slide
    Slide
    previous arrow
    next arrow
  • ವೇದ ಓದುವದೇ ಒಂದು ಸೌಭಾಗ್ಯ: ಸ್ವರ್ಣವಲ್ಲೀ ಶ್ರೀ

    300x250 AD

    ಶಿರಸಿ: ವೇದ ಓದುವದೇ ಒಂದು ಸೌಭಾಗ್ಯ. ಅದನ್ನು ಅರಿತು ಅಧ್ಯಯನ ನಡೆಸಬೇಕು ಎಂದು ಸೋಂದಾ ಸ್ವರ್ಣವಲ್ಲೀ‌ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿ ಸೂಚಿಸಿದರು.

    ಅವರು ಸ್ವರ್ಣವಲ್ಲೀಯಲ್ಲಿ ಕೈಗೊಂಡ ತಮ್ಮ 32ನೇ ಚಾತುರ್ಮಾಸ್ಯ ವೃತದ ನಡುವೆ ಬಿಡುವು ಮಾಡಿಕೊಂಡು ಮಠದಲ್ಲಿನ ಸಂಸ್ಕೃತ ಪಾಠಶಾಲೆ, ಸಂಸ್ಕೃತ‌ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿಶೇಷ ಪಾಠ ಮಾಡಿ ಆಶೀರ್ವಚನ ನುಡಿದರು.

    ಇಡೀ ವಿಶ್ವದ ಪ್ರಾಚೀನ ಸಾಹಿತ್ಯ ಎಂದರೆ ವೇದಗಳು. ವಿಶ್ವದಲ್ಲಿ ಕೆಲವು ದೇಶಗಳಿಗೆ ಪ್ರಾಚೀನ ಇತಿಹಾಸ ಇದೆ. ಗ್ರೀಕ್, ಇಜಿಪ್ತನ ದೇಶಗಳನ್ನು ಪ್ರಾಚೀನ ಎನ್ನುತ್ತಾರೆ. ಅಲ್ಲಿನ ಸಾಹಿತ್ಯಗಳೂ ಪ್ರಾಚೀನವಾಗಿವೆ. ಆದರೆ‌ ಅದಕ್ಕಿಂತ ಪ್ರಾಚೀನ ಆದವು ನಮ್ಮ ವೇದಗಳು ಎಂದು ಶ್ರೀಗಳು ಉದಾಹರಣೆ ಸಹಿತ ವಿಶ್ಲೇಷಿಸಿದರು‌.ವಿಶ್ವದ ಅತ್ಯಂತ ಪ್ರಾಚೀನ ಸಾಹಿತ್ಯ ನಮ್ಮ ವೇದಗಳು ಎಂಬುದಕ್ಕೆ ಉಲ್ಲೇಖ ನೀಡಿ  ತಪಸ್ಸು ಮಾಡಿ ಬ್ರಹ್ಮನಿಂದಲೇ ನಮ್ಮ ಋಷಿ ಮುನಿಗಳು ರಚಿಸಿದ ಸಾಹಿತ್ಯ ವೇದಗಳು. ನಮ್ಮ ಸಂಸ್ಕೃತಿ ಎಂಬ ಮಂದಿರದ ಗರ್ಭಗುಡಿ ವೇದಗಳು. ವೇದಗಳ ಜೊತೆ ಶಾಸ್ತ್ರಗಳು ಕೂಡ ಹತ್ತಿರವು ಎಂದರು.

     ಗರ್ಭಗುಡಿ ಒಳಗೆ ಏನಿದೆ ಎಂದು ಅರಿಯಲು ವೇದ ಸಾಹಿತ್ಯಗಳನ್ನು ಅರಿಯಲೇ ಬೇಕು. ಸಂಸ್ಕೃತಿ  ಎಂಬ ಮಂದಿರದ ಗರ್ಭ ಗುಡಿ ಒಳಗೆ ಹೋಗುವವರು ಕಡಿಮೆ. ವೇದ ಶಾಸ್ತ್ರ  ಓದುವರು ಗರ್ಭಗುಡಿಯೊಳಗೆ ಹೋಗಲು ಸಾಧ್ಯ. ಈ‌ ಕಾರಣದಿಂದಲೇ ವೇದ ಶಾಸ್ತ್ರ ಅಧ್ಯಯನ ಒಂದು ಸೌಭಾಗ್ಯ. ಅದನ್ನು ಅರಿತು ಮುನ್ನಡಯಬೇಕು ಎಂದರು.

    ‌ವೇದಗಳು, ಶಾಸ್ತ್ರಗಳು ಆರ್ಷ ಸಾಹಿತ್ಯ. ಋಷಿಗಳಿಂದ ಬಂದ ಸಾಹಿತ್ಯ. ಋಷಿಗಳು ಬ್ರಹ್ಮ ನಿಂದ ವೇದ  ಕಂಡರು ಎಂಬ ಉಲ್ಲೇಖವಿದೆ. ಎಲ್ಲ ವೇದಗಳೂ ಋಷಿಗಳಿಂದ ಬಂದಿವೆ. ಬ್ರಹ್ಮ ದೇವನ ಅನುಗ್ರಹದಿಂದ ಋಷಿಗಳು ವೇದ ಪಡೆದವರು. ಅವರು ತಪಸ್ಸಿನಿಂದ ಕಂಡು‌ಕೊಂಡು ವೇದಗಳನ್ನು ನಮಗೆ ‌ನೀಡಿದರು. ಋಷಿಗಳ ಮೂಲಕ ಬಂದ್ದದ್ದು ವೇದ ಆದರೆ, ಋಷಿಗಳು ನೀಡಿದ್ದು ಶಾಸ್ತ್ರ. ಪ್ರತಿ ಶಾಸ್ತ್ರದ, ವೇದದ ಮೂಲ‌ ಒಬ್ಬ ಮಹರ್ಷಿ ಇದ್ದಾನೆ. ಕಣಾದರು, ಕಪಿಲರು, ಪತಂಜಲಿ, ಗೌತಮರು ಹೀಗೆ ಆರು ದರ್ಶನಗಳಿಗೂ ಮೂಲ ಋಷಿಗಳೆ ಎಂದರು. 

    300x250 AD

     ಆರ್ಷ ಸಾಹಿತ್ಯ ಓದುವದು ಪುಣ್ಯ, ಅದು ನಮ್ಮ ಸೌಭಾಗ್ಯ. ಆ ಸೌಭಾಗ್ಯ ಸದುಪಯೋಗ ಪಡೆದುಕೊಳ್ಳಬೇಕು. ಹಿಂದಿನ ಅದೃಷ್ಟದಿಂದ, ಪುಣ್ಯದಿಂದ ಬಂದದ್ದು ಈ ಸೌಭಾಗ್ಯ. ಅದನ್ನು ಅರಿತು ಅಧ್ಯಯನ ಮಾಡಿ ಎಂದೂ ಹೇಳಿದರು.

    ಸುಖ ಬಂದರೆ ಅದು ಹಿಂದಿನ ಪುಣ್ಯದಿಂದ ಬಂದಿರುತ್ತದೆ. ಹಿಂದಿನ ಸತ್ಕರ್ಮದಿಂದ ಬಂದಿದೆ ಎಂದೇ ಅರ್ಥ. ಇಲ್ಲಿ ಓದುವದೂ ಪುಣ್ಯ ಎಂದು ಭಾವಿಸಿದರೆ ವೇದ ಶಾಸ್ತ್ರ ಓದಲು‌ ಉತ್ಸಾಹ ಬರುತ್ತದೆ ಎಂದ ಶ್ರೀಗಳು, ಓದುವಾಗ ಬೇರಡೆ ಲಕ್ಷ್ಯ ಇಟ್ಟುಕೊಳ್ಳದೇ ಓದಿ ಎಂದೂ ಹೇಳಿದರು.ಈ ವೇಳೆ ಪ್ರಾಚಾರ್ಯ ನರಸಿಂಹ ಭಟ್ಟ ಇತರರು ಇದ್ದರು.

    ವಿದ್ವತ್ ತರಗತಿಗಳಿಗೆ ಬಂದಾಗಲೂ ಕಾವ್ಯ ಓದು, ಗ್ರಂಥಗಳ‌ ಕಂಠಪಾಠ ಇಟ್ಟರೆ ಸಂಸ್ಕೃತ ವ್ಯುತ್ಪತ್ತಿ ಸುಲಭ. ಅದು ಸಲೀಸಾಗುತ್ತದೆ. ಇಲ್ಲವಾದರೆ ವಿದ್ವತ್ ಆದರೂ  ಮೂಲಭೂತ ಸಂಗತಿಗಳೇ ಗಮನಕ್ಕೆ ಬಾರದಂತೆ ಆಗುತ್ತದೆ.–ಸ್ವರ್ಣವಲ್ಲೀ ಶ್ರೀ

    ಸ್ವರ್ಣವಲ್ಲೀ ಶ್ರೀಗಳು ಮಠದಲ್ಲಿ ಓದು ಪಾಠಶಾಲಾ ಹಾಗೂ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಬಿಡುವು ಇದ್ದಾಗ, ಅಥವಾ ಬಿಡುವು ಮಾಡಿಕೊಂಡಾದರೂ ಪಾಠ ಮಾಡುವ ಕ್ರಮ ಇಟ್ಟುಕೊಂಡಿದ್ದಾರೆ. ತಮ್ಮ ಬಿಡುವಿಲ್ಲದ ಅನುಷ್ಠಾನ, ಶಿಷ್ಯರ ಭೇಟಿ, ಸಮಾಜಮುಖಿ ಕಾರ್ಯಗಳ ನಡುವೆ ಈ ಪಾಠ ಮಾರ್ಗದರ್ಶನ ಬಿಟ್ಟಿಲ್ಲ ಎಂಬುದು ವಿಶೇಷ. ಶ್ರೀಗಳು ಚಾತುರ್ಮಾಸ್ಯದ ಅವಧಿಯಲ್ಲೂ ಬಿಡುವು ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿಶೇಷ ಗೋಷ್ಠಿ ತೆಗೆದುಕೊಳ್ಳುತ್ತಾರೆ ಎಂಬುದು ಉಲ್ಲೇಖನೀಯ.

    Share This
    300x250 AD
    300x250 AD
    300x250 AD
    Leaderboard Ad
    Back to top