ಹೊನ್ನಾವರ: ಶ್ರೀಕ್ಷೇತ್ರ ಧರ್ಮಸ್ಥಳದ ‘ಜನ ಮಂಗಲ’ ಕಾರ್ಯ ಯೋಜನೆಯಲ್ಲಿ ತಾಲೂಕಿನ ಗುಣವಂತೆಯ ಆಕಸ್ಮಿಕ ಅನಾರೋಗ್ಯಕ್ಕೆ ಗುರಿಯಾಗಿದ್ದ ಈಶ್ವರ ನಾಯ್ಕ್ ಇವರಿಗೆ 20 ಸಾವಿರ ರೂ.ನ ಚೆಕ್ ಹಾಗೂ ವ್ಹೀಲ್‌ಚೇರ್ ವಿತರಣಾ ಕಾರ್ಯ ಗ್ರಾಮಾಭಿವೃದ್ಧಿ ಯೋಜನೆಯಿಂದ ಜರುಗಿತು.
ಸಂಘದ ಜಿಲ್ಲಾ ನಿರ್ದೇಶಕ ಮಹೇಶ ಎಂ.ಡಿ. ಮಾತಾಡಿ, ಸಂಕಷ್ಟದಲ್ಲಿ ಇದ್ದವರಿಗೆ ನೆರವಾಗಲು ಮಾನವೀಯ ಯೋಜನೆ ‘ಜನ ಮಂಗಲ’ ಕಾರ್ಯಕ್ರಮವಾಗಿದೆ. ಬೇರೆ ಬೇರೆ ಕಾರಣಕ್ಕೆ ಯಾರಿಗೆ ಸರ್ಕಾರದಿಂದ ಈ ಸೌಲಭ್ಯ ಪಡೆಯಲು ಆಗುವುದಿಲ್ಲವೋ ಅಂತ ಜನರಿಗೆ ಸೌಲಭ್ಯ ನೀಡುವುದಾಗಿದೆ. ಜಿಲ್ಲೆಯ ಕುಮಟಾ, ಹೊನ್ನಾವರ, ಭಟ್ಕಳ, ಅಂಕೋಲಾ, ಹಾಗೂ ಬೈಂದೂರ ಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ. ವಿಕಲ ಚೇತನರಿಗೆ ವ್ಹೀಲ್‌ಚೇರ್, ಸ್ಟಿಕ್, ವಾಟರ್ ಬ್ಯಾಗ್ ಮೊದಲಾದವುಗಳನ್ನು ನೀಡಲಾಗುತ್ತದೆ. ಜಿಲ್ಲೆಯಲ್ಲಿ 30ಕ್ಕೂ ಅಧಿಕ ಜನರಿಗೆ ವಿತರಿಸಿದ್ದು, 60 ಸಾವಿರಕ್ಕೂ ಹೆಚ್ಚಿಗೆ ಆರ್ಥಿಕ ಸಹಾಯ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಸಮಾಜ ಸೇವಾನಿರತರು, ಸುಭಾಷ್ ಯುವಕ ಸಂಘದ ಅಧ್ಯಕ್ಷ ಶಂಕರ ಗೌಡ, ಗುಣವಂತೆ ಯೋಜನಾಧಿಕಾರಿ ವಾಸಂತಿ ಅಮಿನ್ ಹಾಗೂ ಮೇಲ್ವಿಚಾರಕ ಉದಯ ಒಕ್ಕೂಟದ ಅಧ್ಯಕ್ಷೆ ಜಾನಕಿ ಗೌಡ, ಸ್ಥಳೀಯರಾದ ಸುಬ್ರಾಯ ಆಚಾರಿ, ಬಾಬು ನಾಯ್ಕ, ಹನುಮಂತ ಜೋಗಿ ಮೊದಲಾದವರು ಇದ್ದರು.