Slide
Slide
Slide
previous arrow
next arrow

ಟಿಸಿಎಸ್‌ಎಫ್ ಹತ್ತನೇ ತರಗತಿಯಲ್ಲಿ ದಿಶಿತಾ ಕೋಮಾರ್ ದೇಶಕ್ಕೆ ಮೂರನೇ ಸ್ಥಾನ

300x250 AD

ಯಲ್ಲಾಪುರ: ತಾಲೂಕಿನ ಬೀಗಾರ ಮೂಲದ, ಹಾಲಿ ಗುಜರಾತಿನ ಅಹಮದಾಬಾದ್ ಆನಂದ ನಿಕೇತನ ಶಾಲೆಯ ವಿದ್ಯಾರ್ಥಿನಿ ದಿಶಿತಾ ಕೋಮಾರ್ ಇವಳು ಟಿಸಿಎಸ್‌ಎಫ್ ಹತ್ತನೇ ತರಗತಿ ಫಲಿತಾಂಶದಲ್ಲಿ ದೇಶಕ್ಕೆ ಮೂರನೇ ಸ್ಥಾನ ಹಾಗೂ ಗುಜರಾತಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ದಿಶಿತಾ ಕೋಮಾರ್ 497/500(ಶೇ 99.4) ಅಂಕ ಪಡೆದಿದ್ದಾಳೆ. ಇವಳು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನಲ್ಲಿ ಹಾಗೂ ಪ್ರಾಥಮಿಕ ಪ್ರೌಢಶಿಕ್ಷಣವನ್ನು ಕ್ರಮವಾಗಿ ಸೂರತ್ ಮತ್ತು ಅಹಮದಾಬಾದ್‌ನಲ್ಲಿ ಪೂರೈಸಿದ್ದಾಳೆ.

ವಿಜ್ಞಾನ ಗಣಿತ ಸಾಮಾನ್ಯ ಜ್ಞಾನ ಒಲಂಪಿಯಾಡಿನಲ್ಲಿ ಚಿನ್ನದ ಪದಕಗಳನ್ನು 8 ಮತ್ತು 9ನೇ ತರಗತಿಯಲ್ಲಿ ಗಳಿಸಿದ್ದಾಳೆ. ಅಭ್ಯಾಸ ಅಷ್ಟೇ ಅಲ್ಲದೆ ಸಹ ಪಠ್ಯ ಚಟುವಟಿಕೆಗಳಾದ ಭರತನಾಟ್ಯ, ಪ್ರಬಂಧ, ಚಿತ್ರಕಲೆ ಹಾಗೂ ಚರ್ಚಾ ಸ್ಪರ್ಧೆಗಳಲ್ಲಿ ಪದಕ ವಿಜೇತಳಾಗಿದ್ದಾಳೆ. ಎ.ಎಸ್.ಆಯ್.ಎಸ್.ಸಿ ಚರ್ಚಾ ಸ್ಪರ್ಧೆಯಲ್ಲಿ 2021ರಲ್ಲಿ ನಾರ್ತ್ವೆಸ್ಟ್ ಜೋನ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಕೋವಿಡ್ ಮಹಾಮಾರಿಯೂ ತನ್ನ ಅಭ್ಯಾಸ ಚಟುವಟಿಕೆಗೆ ಅಡ್ಡಿಪಡಿಸಿದ್ದರು. ಪಠ್ಯಪುಸ್ತಕ ಮತ್ತು ಆನ್ ಲೈನ್ ಸಂಪನ್ಮೂಲ ಮತ್ತು ಸ್ವ ಪರಿಶ್ರಮದಿಂದ ಈ ಸಾಧನೆ ಮಾಡಿದ್ದೇನೆ ಎಂದು ಹೇಳುವ ದಿಶಿತಾ ಕೋಮಾರ ತನ್ನ ಸಾಧನೆಗೆ ಶಿಕ್ಷಕರು ಪಾಲಕರು ಸಹಪಾಠಿಗಳು ಪ್ರೋತ್ಸಾಹಿಸಿದ್ದನ್ನು ನೆನಪಿಸಿಕೊಳ್ಳುತ್ತಿದ್ದಾಳೆ.

300x250 AD

ದಿಶಿತಾ ಕೋಮಾರ್ ಯಲ್ಲಾಪುರದ ಬೀಗಾರ ಮೂಲದ ಪ್ರಸ್ತುತ ಗುಜರಾತ ಗಾಂಧಿನಗರದ ಐಪಿಎಸ್ ಅಧಿಕಾರಿ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ನರಸಿಂಹ ಕೋಮಾರ ಹಾಗೂ ಶಾರದ ಕೋಮಾರ ದಂಪತಿಗಳ ಪುತ್ರಿಯಾಗಿದ್ದಾಳೆ.

Share This
300x250 AD
300x250 AD
300x250 AD
Back to top