• Slide
    Slide
    Slide
    previous arrow
    next arrow
  • ಭಗವಂತನ ಕೃಪೆಯಿಂದ ಮುಕ್ತಿ ಹೊಂದಬೇಕು: ಸ್ವರ್ಣವಲ್ಲೀ ಶ್ರೀ

    300x250 AD

    ಶಿರಸಿ: ಪ್ರತಿಯೊಬ್ಬ ಮನುಷ್ಯನೂ ಕೂಡ ಭಗವಂತನ ಕೃಪೆಯನ್ನು ಹೊಂದಿ ಮುಕ್ತಿಯನ್ನು ಹೊಂದಲು ಪ್ರಯತ್ನಿಸಬೇಕು. ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ  ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.

     ಅವರು ಸ್ವರ್ಣವಲ್ಲೀ ಯಲ್ಲಿ ನಡೆಸುತ್ತಿರುವ 320ನೇ ಚಾತುರ್ಮಾಸ್ಯದ ನಿಮಿತ್ತ ಗುಂದ ಸೀಮೆ ಹಾಗೂ ಚಾಪಖಂಡ ಭಾಗದ ಶಿಷ್ಯ-ಭಕ್ತರು ಸಮರ್ಪಿಸಿದ ವಿವಿಧ ಸೇವೆಗಳನ್ನು ಸ್ವೀಕರಿಸಿ ಆಶೀರ್ವಚನ ನುಡಿದರು.

    ಮನುಷ್ಯ ಜನ್ಮ ಲಭಿಸುವುದು ದುರ್ಲಭ. ಅದರಲ್ಲೂ ಸುಸಂಸ್ಕೃತ ಕುಟುಂಬದಲ್ಲಿ ಜನ್ಮ ಆಗುವುದು ಇನ್ನೂ ದುರ್ಲಭ. ಆದ್ದರಿಂದ ಲಭಿಸಿದ ಪರಮ ದುರ್ಲಭವಾದ ಮನುಷ್ಯ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದ ಶ್ರೀಗಳು, ಮುಕ್ತಿ ಎಂದರೆ ಬಿಡುಗಡೆ. ಅದನ್ನು ಪಡೆಯಬೇಕೆಂಬಾಗ ನಾವು ಬಂಧನದಲ್ಲಿ ಇದ್ದೇವೆ ಎಂಬುದು ಸಿದ್ಧವಾಗುತ್ತದೆ. ನಾವೆಲ್ಲ ಮನಸ್ಸಿನ ಹಿಂದಿರುವ ಸತ್ವ, ರಜ, ತಮೋಗುಣಗಳಿಂದ ಬಂಧಿಸಲ್ಪಟ್ಟಿದ್ದೇವೆ ಎಂದರು.

    ನಾನು ಎಂದರೆ ಶರೀರವಲ್ಲ. ಅದರೊಳಗಿನ ಜೀವ. ಈ ಅರಿವು ಸಾಮಾನ್ಯರ ಅರಿವಿಗಿಲ್ಲ. ಇದೂ ಕೂಡ ಈ ಗುಣತ್ರಯಗಳ ಪ್ರಭಾವೇ ಆಗಿದೆ. ಗುಣತ್ರಯಗಳ ಸಾಮಾನ್ಯ ತಿಳಿವಳಿಕೆಯನ್ನು ಒಂದು ಉದಾಹರಣೆ ಮೂಲಕ ಹೇಳಬಹುದು ಎಂದರು.

    ಮನೆಯಲ್ಲಿ ಬಾಲಕರು ರಾತ್ರಿ ಊಟ ಮಾಡಿ ಅಧ್ಯಯನಕ್ಕೆ ಕುಳಿತಾಗ ತೂಕಡಿಗೆ ಬರತೊಡಗುತ್ತದೆ. ಆಗ ಸ್ವಲ್ಪ ಎದ್ದು ಓಡಾಡಿದರೆ ನಿದ್ದೆ ದೂರವಾಗಿ ಓದಲು ಆಸಕ್ತಿ ಬರುತ್ತದೆ. ಇಲ್ಲಿ ಮೂರೂ ಗುಣಗಳನ್ನು ನೋಡಬಹುದು. ನಿದ್ದೆ ಬಂದದ್ದು ತಮೋಗುಣದ ಆಧಿಕ್ಯದಿಂದ. ಚಟುವಟಿಕೆ ರಜೋಗುಣದ ಲಕ್ಷಣ. ಅದರ ಆಧಿಕ್ಯ ಓಡಾಡುವುದರಿಂದ ಉಂಟಾಯಿತು. ಮನಸ್ಸು ಹಗುರವಾದಾಗ ಓದುವ ಕುರಿತು ಆಸಕ್ತಿ ಬಂದದ್ದು ಸತ್ವಗುಣದಿಂದ. ಮೂರೂ ಗುಣಗಳು ಒಂದು ಹದದಲ್ಲಿ ಸೇರುವಿಕೆಯಿಂದ ಮನಸ್ಸು ಪರಿಶುದ್ಧವಾಗುತ್ತದೆ. ಅಂಥ ಮನಸ್ಸು ಮುಕ್ತಿ ಹೊಂದಲು ಸಹಕಾರಿ ಎಂದರು.

    300x250 AD

    ಮನಸ್ಸಿನ ಬಂಧನದಿಂದ ಬಿಡುಗಡೆ ಹೊಂದಲು ಉದಾಸೀನ ಭಾವವನ್ನು ಬೆಳೆಸಿಕೊಳ್ಳಲು ಭಗವಂತ ಭಗವದ್ಗೀತೆಯಲ್ಲಿ ತಿಳಿಸಿದ್ದಾನೆ. ಇದು ಅಷ್ಟು ಸುಲಭ ಸಾಧ್ಯವಲ್ಲ. ಯೋಗಿಗಳು ಸಾಧಿಸ ಬಲ್ಲರು. ಎಲ್ಲರೂ ಅನುಸರಿಸಬಹುದಾದ ಸುಲಭ ಶ್ರೇಷ್ಠವಾದ ಮಾರ್ಗ ಭಕ್ತಿಮಾರ್ಗ. ಇದನ್ನೂ ಭಗವಂತನೇ ಹೇಳಿದ್ದಾನೆ. ಭಗವಂತನಲ್ಲಿ ಅಚಲವಾದ ಶಕ್ತಿಯನ್ನು ಬೆಳೆಸಿಕೊಳ್ಳುವುವ ಮೂಲಕ ಭವಬಂಧನದಿಂದ ಮುಕ್ತರಾಗಿ ಮೋಕ್ಷವನ್ನು ಹೊಂದಬಹುದು ಎಂದು ವಿವರಿಸಿದರು.

    ಆರಂಭದಲ್ಲಿಆರ್ . ಎಸ್. ಹೆಗಡೆ ಬೈರುಂಬೆ ಆಡಳಿತ ಮಂಡಳಿಯ ಪರವಾಗಿ ಎಲ್ಲರನ್ನೂ ಸ್ವಾಗತಿಸಿದರು. 

    ಗುಂದ ಮತ್ತು ಚಾಪಖಂಡ ಭಾಗದಿಂದ ಆಗಮಿಸಿದ ಶಿಷ್ಯಭಕ್ತರು ಕುಂಕುಮಾರ್ಚನೆ, ಗಾಯತ್ರೀ ಜಪ, ಶ್ರೀ ಗಳವರ ಭಿಕ್ಷೆಪಾದಪೂಜೆ ಮುಂತಾದ ಧಾರ್ಮಿಕ ಅನುಷ್ಠಾನಗಳನ್ನು ನೆರವೇರಿಸಿದರು. 

    ನಾನು ಎಂದರೆ ಶರೀರವಲ್ಲ. ಅದರೊಳಗಿನ ಜೀವ. ಈ ಅರಿವು ಸಾಮಾನ್ಯರ ಅರಿವಿಗಿಲ್ಲ.–ಸ್ವರ್ಣವಲ್ಲೀ ಶ್ರೀ

    Share This
    300x250 AD
    300x250 AD
    300x250 AD
    Leaderboard Ad
    Back to top