ಶಿರಸಿ: ಮೀನುಗಾರಿಕೆ ಇಲಾಖೆಯಿಂದ ವೃತ್ತಿಪರ ಮೀನುಗಾರರಿಗೆ ಉಚಿತವಾಗಿ ಜನತಾ ಸಾಮೂಹಿಕ ಅಪಘಾತ ವಿಮೆ ಯೋಜನೆ ಜಾರಿಗೆ ತಂದಿದ್ದು, ಶಿರಸಿ ಸಿದ್ದಾಪುರ ಕ್ಷೇತ್ರದಿಂದ ಸುಮಾರು 55ಕ್ಕೂ ಹೆಚ್ಚಿನ ವೃತ್ತಿಪರ ಮೀನುಗಾರರು ಯೋಜನೆಯ ಲಾಭ ಪಡೆಯಲಿದ್ದಾರೆ. ಜನತಾ ಸಾಮೂಹಿಕ ಅಪಘಾತ ವಿಮೆಯು ಕೇಂದ್ರ ಸರಕಾರದ ಮಹತ್ವದ ಯೋಜನೆಗಳಲ್ಲೊಂದಾಗಿದ್ದು 5 ಲಕ್ಷ ರೂ.ವರೆಗಿನ ವಿಮಾ ಮೊತ್ತವನ್ನು ಕೇಂದ್ರ ಸರಕಾರವೇ ಭರಿಸಲಿದೆ. ಮೊದಲು ಮೀನು ಹಿಡಿಯುವ ಸಂದರ್ಭದಲ್ಲಿ ಮೃತಪಟ್ಟ ಮೀನುಗಾರರಿಗೆ ಮಾತ್ರ ಈ ವಿಮೆ ಅನ್ವಯವಾಗುತ್ತಿತ್ತು. ಆದರೆ ಇದರ ಹೊರತಾಗಿ ಅಫಘಾತ ಇಲ್ಲವೇ ಇನ್ಯಾವುದೋ ರೂಪದಲ್ಲಿ ಸಾಯುವ ಮೀನುಗಾರರಿಗೂ ಈ ಯೋಜನೆ ಲಾಭ ಲಭಿಸಲಿದೆ. ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಆಸ್ಪತ್ರೆ ವೆಚ್ಚ ಕೂಡಾ ಸರಕಾರ ಈ ಯೋಜನೆಯಲ್ಲಿ ಭರಿಸಲಿದೆ. ಮೀನುಗಾರಿಕೆ ಸಹಕಾರಿ ಸಂಘದ ಸದಸ್ಯರು, ಪರವಾನಗಿ ಪಡೆದ ವೃತ್ತಿಪರ ಮೀನುಗಾರರು ಹಾಗು ಮೀನು ಹಿಡಿಯುವ ಟೆಂಡರ್ ದಾರರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.