Slide
Slide
Slide
previous arrow
next arrow

ಬ್ರೇಸ್ಲೆಟ್ ಮರಳಿಸಿದ ಆಟೋ ಚಾಲಕ:ಪೊಲೀಸ್ ಇಲಾಖೆಯಿಂದ ಸನ್ಮಾನ

300x250 AD

ಶಿರಸಿ:ನಗರದ ಶ್ರೀ ಮಾರಿಕಾಂಬಾ ದೇವಸ್ಥಾನದಕ್ಕೆ ದರ್ಶನಕ್ಕೆ ಬಂದ ಪ್ರವಾಸಿಗ ದೇವೇಂದ್ರ ನಾಯ್ಕ,ಭಟ್ಕಳ ಇವರು ಆಟೋ ರಿಕ್ಷಾದಲ್ಲಿ ಸಂಚಾರ ‌ಮಾಡುವಾಗ 10 ಗ್ರಾಂ ತೂಕದ ಬ್ರೇಸ್ ಲೆಟ್ ನ್ನು‌ ಮಾರಿಕಾಂಬಾ ದೇವಸ್ಥಾನದ ಎದುರುಗಡೆಯಲ್ಲಿ ಜು.15 ರಂದು ಕಳೆದುಕೊಂಡಿದ್ದರು. ಕಳೆದುಕೊಂಡ ಬ್ರೇಸ್ಲೆಟ್ ಮೊಗೇರರವರ ಆಟೋದಲ್ಲಿ ಸಿಕ್ಕಿದ್ದು ಆಟೋ ಚಾಲಕ ಭಾಸ್ಕರ ಮೊಗೇರ ಅವರ ಗಮನಕ್ಕೆ ಬಂದಾಗ ಪ್ರಾಮಾಣಿಕತೆಯಿಂದ ಮರಳಿ ತಂದು ಮಾರಿಗುಡಿ ಠಾಣೆಯಲ್ಲಿ ಕರ್ತವ್ಯದಲ್ಲಿ ನಿರತರಿದ್ದ ಪೊಲೀಸ್ ಸಿಬ್ಬಂದಿ ಮಲ್ಲಿಕಾರ್ಜುನ ಇವರಿಗೆ ಕೊಟ್ಟಿದ್ದರು.ನಂತರ ಚಿನ್ನದ ಬ್ರೇಸ್ಲೆಟ್ ನ್ನು ದೇವೇಂದ್ರ ನಾಯ್ಕ ಅವರಿಗೆ ಪೊಲೀಸರ ಸಮಕ್ಷಮದಲ್ಲಿ ಹಿಂದಿರುಗಿಸಲಾಯಿತು. ಆಟೋ‌ ಚಾಲಕನ ಪ್ರಾಮಾಣಿಕತೆ ಮೆಚ್ಚಿ ಪೊಲೀಸ್ ಇಲಾಖೆ ವತಿಯಿಂದ ಭಾಸ್ಕರ ಮೊಗೇರಗೆ ಸನ್ಮಾನ ಮಾಡಲಾಯಿತು.

300x250 AD
Share This
300x250 AD
300x250 AD
300x250 AD
Back to top