ಕಾರವಾರ: ಸೇನೆ ಸೇರಬಯಸುವ ಕರ್ನಾಟಕದ ಯುವ ಜನತೆಗೆ ಸೇನಾ ಪೂರ್ವಭಾವಿ ತರಬೇತಿಯನ್ನು ನೀಡುವ ಸಲುವಾಗಿ ಓರ್ವ ಮಾಜಿ ಸೇನಾ ಅಧಿಕಾರಿ ಮತ್ತು ದೈಹಿಕ ಶಿಕ್ಷಣ ತರಬೇತಿ ಹೊಂದಿರುವ ಮೂರು ಹುದ್ದೆಗಳಿಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಮಾಜಿ ಸೇನಾ ಅಧಿಕಾರಿಗಳು/ ಮಾಜಿ ಸೈನಿಕರು ಈ ಮೇಲ್ sainik.kwr@gmail.com ಮೂಲಕ ತಮ್ಮ ಹೆಸರುಗಳನ್ನು ಜು. 19ರೊಳಗಾಗಿ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ನಿವೃತ್ತ ಸೇನಾ ಅಧಿಕಾರಿಗೆ- 60000, ನಿವೃತ್ತ ಸೈನಿಕರು (ದೈಹಿಕ ಶಿಕ್ಷಣ ತರಬೇತಿ)-30000 ರೂಪಾಯಿ ಮಾಸಿಕ ಗೌರವ ಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08382-226538 ಅಥವಾ sainik.kwr@gmail.comಗೆ ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.