ಶಿರಸಿ: ವಿಶಿಷ್ಟ ರೀತಿಯಲ್ಲಿ ಸಮಾಜ ಸೇವೆಯನ್ನು ಸಲ್ಲಿಸುತ್ತಿರುವ ಶಿರಸಿಯ ಮಹಿಳಾ ಸಂಸ್ಥೆ ಇನ್ನರ್ ವ್ಹೀಲ್ ಕ್ಲಬ್ ಆಫ್ ಶಿರಸಿ ಹೆರಿಟೇಜ್ ನ 2022-23 ಸಾಲಿನ ನೂತನ ಪದಾಧಿಕಾರಿಗಳ ಸೇವಾದೀಕ್ಷೆ ಕಾರ್ಯಕ್ರಮ ಇತ್ತೀಚೆಗೆ ಅರಣ್ಯಭವನದಲ್ಲಿ ಜರುಗಿತು.
ನೂತನ ಅಧ್ಯಕ್ಷರಾಗಿ ಶ್ರೀಮತಿ ಮಾಧುರಿ ಶಿವರಾಮ್ ಕಾರ್ಯದರ್ಶಿಯಾಗಿ ಶ್ರೀಮತಿ ವಿದ್ಯಾ ನಾಯ್ಕ ಖಜಾಂಚಿಯಾಗಿ ಶ್ರೀಮತಿ ಪುಷ್ಪಾ ಭಟ್, ಐ ಎಸ್ ಓ ಆಗಿ ಶ್ರೀಮತಿ ಪೂರ್ಣಿಮಾ ಶೆಟ್ಟಿ ಮತ್ತು ಸಂಪಾದಕಿ ಯಾಗಿ ಶ್ರೀಮತಿ ಸಂಧ್ಯಾ ನಾಯ್ಕ ಸೇವಾದೀಕ್ಷೆ ಪಡೆದರು
ಪದಗ್ರಹಣ ಅಧಿಕಾರಿಯಾಗಿ ಪಿಡಿಸಿ ಡಾ. ಜ್ಯೋತಿ ಪಾಟೀಲ್ ಅವರು ಪ್ರಮಾಣ ವಚನ ಬೋಧಿಸಿದರು.ನಂತರ ಮಾತನಾಡಿದ ಅವರು ಶಿರಸಿ ಕ್ಲಬ್ ನ ಕಾರ್ಯಗಳನ್ನು ಶ್ಲಾಘಿಸಿದರು. ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಸೇವಾಮನೋಭಾವ ಹಾಗೂ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದ ಅವರು ಈ ವರ್ಷವೂ ಸಹ ಕ್ಲಬ್ ನಿಂದ ಉತ್ತಮ ಕಾರ್ಯಗಳು ನಡೆಯಲಿ ಎಂದು ಶುಭ ಕೋರಿದರು.
ನಿರ್ಗಮನ ಅಧ್ಯಕ್ಷೆ ಶ್ರೀಮತಿ ಶ್ವೇತಾ ಪ್ರಭು ಸ್ವಾಗತಿಸಿ,ತಮ್ಮ ಕಾರ್ಯ ಅವಧಿಯಲ್ಲಿ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕ್ಲಬ್ ನ ದಶಮಾನೋತ್ಸವ ದ ಅಂಗವಾಗಿ ಅದು ನಡೆದು ಬಂದ ದಾರಿಯನ್ನು ಶ್ರೀಮತಿ ಮಮತಾ ಹೆಗಡೆ ವಿವರಿಸಿದರು ಸೇವಾದೀಕ್ಷೆ ಸ್ವೀಕರಿಸಿದ ಶ್ರೀಮತಿ ಮಾಧುರಿ ಶಿವರಾಮ್ ಮಾತನಾಡಿ ತಮ್ಮ ಮುಂದಿನ ಕಾರ್ಯಯೋಜನೆ ಗಳ ಬಗ್ಗೆ ಮಾಹಿತಿ ನೀಡಿದರು.ನೂತನ ಸದಸ್ಯರಾಗಿ ಶ್ರೀಮತಿ ಅನಸೂಯಾ ಪಟೇಲ್,ಶ್ರೀಮತಿ ರೂಪಾ ಶೇಟ್ ಮತ್ತು ಶ್ರೀಮತಿ ರೇಖಾ ಭಟ್ ಸೇರ್ಪಡೆಗೊಂಡರು.
ಇದೇ ಸಂದರ್ಭದಲ್ಲಿ ಬಿಸಲಕೊಪ್ಪ ಹೈಸ್ಕೂಲ್ ಗೆ ಚಿಣ್ಣರ ಮಳಿಗೆ ಕೌಂಟರ್ ನ್ನು, ನೀರ್ನಳ್ಳಿ ಶಾಲೆಗೆ ವಿಜ್ಞಾನ ಪ್ರಯೋಗ ಕಿಟ್ ನ್ನು ಹಾಗೂ ಕರಿಯರ್ ಗೈಡೆನ್ಸ್ ಕಿಟ್ ನ್ನೂ ನೀಡಲಾಯಿತು. ಕುಮಾರ ಯತೀಶ್ ಹೆಗ್ಡೆ ಇವನಿಗೆ ವಿಧ್ಯಾಭ್ಯಾಸಕ್ಕಾಗಿ ರೂ. 5,000 ಧನ ಸಹಾಯ ನೀಡಲಾಯಿತು.ರೋಟರಿ ಮತ್ತು ಇನ್ನರ್ ವ್ಹೀಲ್ ಕುಟುಂಬದವರಿಗಾಗಿ ಜೂನ್ 26ರಂದು ಏರ್ಪಡಿಸಿದ್ದ ಹೆಲ್ತ್ ಚೆಕಪ್ ಕ್ಯಾಂಪ್ ನ ರಿಪೋರ್ಟ್ ಫೈಲ್ ಗಳನ್ನು ಸದಸ್ಯರಿಗೆ ವಿತರಿಸಲಾಯಿತು . ನಿರ್ಗಮನ ಕಾರ್ಯದರ್ಶಿ ಶ್ರೀಮತಿ.ರೇಖಾ ಅನಂತಪದ್ಮನಾಭ, ಖಜಾಂಚಿ ಶ್ರೀಮತಿ. ವಿಜಯಶ್ರೀ ಹೆಗ್ಡೆ, ಐಎಸ್ಓ ಶ್ರೀಮತಿ ದೀಪ್ತಿ ಉದಾಸಿ ಮತ್ತು ಎಡಿಟರ್ ಶ್ರಿಮತಿ ನಯನಾ ಸಕಲಾತಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಕುಮಾರಿ ಶ್ರೇಯಾ ಹೆಗಡೆ ಸ್ವಾಗತ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಸೆಕ್ರೆಟರಿ ಶ್ರೀಮತಿ ವಿದ್ಯಾ ನಾಯ್ಕ ವಂದಿಸಿದರು. ಶ್ರೀಮತಿ ಕಿರಣ ಹಬೀಬ್ ಮತ್ತು ಶ್ರೀಮತಿ ಸುನಯನಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.