• Slide
    Slide
    Slide
    previous arrow
    next arrow
  • ಡೀಸೆಲ್ ಕದ್ದ ಅಂತರರಾಜ್ಯ ಕಳ್ಳರು ಅಂದರ್

    300x250 AD

    ಯಲ್ಲಾಪುರ: ಪಟ್ಟಣದ ಹಳಿಯಾಳಕ್ರಾಸ್ ಬಳಿ ಲಾರಿಯನ್ನು ನಿಲ್ಲಿಸಿಟ್ಟು ಚಾಲಕ ಮಲಗಿದ್ದ ವೇಳೆಯಲ್ಲಿ ಡಿಸೈಲ್ ಟ್ಯಾಂಕ್ ಮುಚ್ಚಳ ತೆಗೆದು 30,900 ರೂ ಮೌಲ್ಯದ 360 ಲೀಟರ್ ಡಿಸೈಲ್ ಕಳುವು ಮಾಡಿದ್ದ ಅಂತರಾಜ್ಯ ಕಳ್ಳರನ್ನು ಪೊಲೀಸರು ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆರೋಪಿತರಾದ ರಾಜೇಂದ್ರ ಬಾಪು ಪವಾರ ಶಿವಶಕ್ತಿನಗರ ಮಹಾರಾಷ್ಟ್ರ,ದತ್ತಾ ಭಾಗ್ವತ ಕಾವಡೆ ಉಸ್ಮಾನಬಾದ್,ಕಾಳಿದಾಸ ಲಕ್ಷ್ಮಣ ಕಾಳೆ,ಆಕಾಶ ರಾಜೇಂದ್ರ ಪವಾರ ಮಹಾರಾಷ್ಟ್ರ ಇವರನ್ನು ಪೊಲೀಸರು ಪಟ್ಟಣದ ಟಿ.ಎಂ.ಎಸ್ ಪೆಟ್ರೋಲ್ ಬಂಕ ಬಳಿ ಪಿರ್ಯಾದಿ ಹನುಮಂತ ಹೊಂಡಾ ಹಾವೇರಿ ಅವರ ದೂರಿನನ್ವಯ ಖಚಿತ ಸುಳಿವಿನ‌ ಮೇರೆಗೆ ಕೃತ್ಯಕ್ಕೆ ಬಳಸಿದ ಲಾರಿ,ಸ್ವತ್ತು ಸಹಿತ ಬಂಧಿಸಲಾಗಿದೆ.ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಇನ್ನೊರ್ವ ಆರೋಪಿ ವಶ ಪಡಿಸಿಕೊಳ್ಳಬೇಕಾಗಿದೆ.

    300x250 AD

    ಎಸ್ಪಿ ಸುಮನ್ ಪನ್ನೆಕರ್,ಹೆಚ್ಚುವರಿ ಎಸ್ಪಿ ಎಸ್.ಬದರಿನಾಥ,ಡಿವೈಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಯಳ್ಳೂರು,ಪಿಎಸೈ ಮಂಜುನಾಥ ಗೌಡರ,ಸಿಬ್ಬಂದ್ದಿಗಳಾದ  ಬಸವರಾಜ,ಮಹಮ್ಮದ್ ಶಫಿ,ಗಜಾನನ, ಮಹಾಂತೇಶ,ಮುತ್ತಣ್ಣ, ನಂದೀಶ,ಚಿದಾನಂದ,ಯಲ್ಲಪ್ಪ,ಶೋಭಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top