Slide
Slide
Slide
previous arrow
next arrow

ಧರೆಗುರುಳಿದ ಬೃಹತ್ ಆಲದ ಮರ: ಕೆಲಹೊತ್ತು ಸಂಚಾರ ಸ್ಥಗಿತ

300x250 AD

ಹೊನ್ನಾವರ: ತಾಲೂಕಿನ ಅರೇಅಂಗಡಿ ಸಮೀಪ ಬೃಹತ್ ಆಲದ ಮರವೊಂದು ರಸ್ತೆಯಲ್ಲಿ ಬಿದ್ದ ಪರಿಣಾಮ ಒಂದು ಗಂಟೆಗೂ ಅಧಿಕ ಕಾಲ ರಸ್ತೆ ಸಂಚಾರ ಬಂದ್ ಆಗುವಂತಾಯಿತು.

ಹೊನ್ನಾವರದಿಂದ ಅರೇಅಂಗಡಿ ಮಾರ್ಗವಾಗಿ ಸಾಲ್ಕೋಡ್, ಕೆರೆಕೋಣ, ದರ್ಬೆಜಡ್ಡಿ, ಕಾನಕ್ಕಿ, ತೊಳಸಾಣಿ, ಚಿಕ್ಕೋಳಿ ಹೋಗುವ ವಾಹನಗಳು ರಸ್ತೆಯಲ್ಲಿ ನಿಂತವು. ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಾಲ್ಕೋಡ್ ಗ್ರಾಮ ಪಂಚಾಯತಿ ಸಿಬ್ಬಂದಿಗಳ ಸಹಕಾರದಿಂದ ಮರವನ್ನು ಕಟಾವು ಮಾಡುವ ಮೂಲಕ ಸಂಚಾರ ಸುಗಮಗೊಳಿಸಿದರು.

300x250 AD

ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ಲೈನ್ ತುಂಡಾಗಿದ್ದು, ಹೆಸ್ಕಾಂ ಸಿಬ್ಬಂದಿ ಮಳೆಯ ನಡುವೆ ಕರ್ತವ್ಯ ನಿರ್ವಹಿಸುವ ಮೂಲಕ ಕೆಲವೇ ಗಂಟೆಯಲ್ಲಿ ವಿದ್ಯುತ್ ಸರಿಪಡಿಸುವ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾದರು. ಬೃಹತ್ ಮರ ರಸ್ತೆಯಲ್ಲಿ ಬಿದ್ದರೂ ಹೆಚ್ಚಿನ ರೀತಿಯಲ್ಲಿ ಹಾನಿ ಸಂಭವಿಸಿಲ್ಲ.

Share This
300x250 AD
300x250 AD
300x250 AD
Back to top