• Slide
    Slide
    Slide
    previous arrow
    next arrow
  • ಸಿಎ ಪರೀಕ್ಷೆಯಲ್ಲಿ ಪವನ್ ಹೆಗಡೆ ಬೊಮ್ನಳ್ಳಿ ತೇರ್ಗಡೆ

    300x250 AD

    ಶಿರಸಿ: ತಾಲೂಕಿನ ಅಗಸಾಲ ಬೊಮ್ನಳ್ಳಿಯ ಪವನ್ ದಿವಾಕರ ಹೆಗಡೆ ಪ್ರಸ್ತುತ ಸಾಲಿನ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ತೇಗರ್ಡೆಯಾಗುವ ಮೂಲಕ ಅಪ್ರತಿಮ ಸಾಧನೆಗೈದಿದ್ದಾರೆ.

    ಇವರು ತಾಲೂಕಿನ ಅಗಸಾಲ ಬೊಮ್ನಳ್ಳಿಯ ಶ್ರೀಮತಿ ಮಮತಾ ಮತ್ತು ದಿವಾಕರ ಹೆಗಡೆ ಪುತ್ರನಾಗಿದ್ದು, ತಾಲೂಕಿನ ಶ್ರೀ ಶಾರಾದಾಂಬಾ ಪ್ರೌಢಶಾಲೆಯಲ್ಲಿಯಲ್ಲಿ ಪ್ರೌಢಶಿಕ್ಷಣ, ನಗರದ ಪ್ರತಿಷ್ಠಿತ ಎಂ.ಇ.ಎಸ್ ಕಾಲೇಜಿನಲ್ಲಿ ಪಿಯು ಹಾಗು ಪದವಿ ಶಿಕ್ಷಣ ಪೂರೈಸಿ, ಬೆಂಗಳೂರಿನ ಪವನ್ ಆರ್ & ಅಸೋಸಿಯೇಟ್ಸ್ ಬಳಿ ಆರ್ಟಿಕಲ್ ಶಿಪ್ ಮುಗಿಸಿದ್ದರು.

    300x250 AD

    ಬಾಲ್ಯದಿಂದಲೇ ಅಭ್ಯಾಸದ ಜೊತೆಗೆ ಕ್ರೀಡೆಯಲ್ಲಿ ಅದರಲ್ಲಿಯೂ ಕ್ರಿಕೆಟ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಸತತ ಅಧ್ಯಯನ, ದೃಢಸಂಕಲ್ಪ ಮತ್ತು ಸಾಧಿಸುವ ಛಲವಿದ್ದರೆ ಯಾವುದು ಅಸಾಧ್ಯವಲ್ಲ. ಸೋತಾಗ ಕುಗ್ಗದೆ, ಗೆದ್ದಾಗ ಬೀಗದೇಯಿದ್ದರೆ ಯಶಸ್ಸು ಖಂಡಿತಾ ದೊರೆಯುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. ಅವರ ಮುಂದಿನ ಭವಿಷ್ಯವು ಉಜ್ವಲವಾಗಿರಲಿ ಎಂದು e – ಉತ್ತರ ಕನ್ನಡವು ಹಾರೈಸುತ್ತದೆ.

    Share This
    300x250 AD
    300x250 AD
    300x250 AD
    Leaderboard Ad
    Back to top