• Slide
    Slide
    Slide
    previous arrow
    next arrow
  • ಅಂಗನವಾಡಿ ನೌಕರರ ಜಿಲ್ಲಾ ಸಂಘಟನೆಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹ

    300x250 AD

    ಕಾರವಾರ: ಸುಪ್ರೀಂ ಕೋರ್ಟ್ ಆದೇಶದಂತೆ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ಜಾರಿ ಮಾಡುವುದು, ನೌಕರರಿಗೆ ಶಾಸನಬದ್ಧವಾಗಿ ಸಿಗಬೇಕಾದ ಸವಲತ್ತುಗಳನ್ನು ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಜಿಲ್ಲಾ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

    ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು ಅಂಗನವಾಡಿ ಕೇಂದ್ರಗಳಲ್ಲಿಯೇ ಶಾಲಾ ಪೂರ್ವ ಶಿಕ್ಷಣ ಉಳಿಸಬೇಕು. 6 ತಿಂಗಳಿಂದ 6 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಹಾಲುಣಿಸುವ ತಾಯಂದಿರಿಗೆ ಆಹಾರ ಭದ್ರತೆ ಒದಗಿಸುವ ಪ್ರಮುಖ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರಿಗೆ ಗೌರವ ಧನ ಹೆಚ್ಚಿಸಬೇಕು. ಐಸಿಡಿಎಸ್ ಕೆಲಸಗಳ ಜೊತೆಗೆ ಇತರೆ ಕೆಲಸಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ ಇದರಿಂದ ನೌಕಕರಿಗೆ ಹೊರೆಯಾಗಿದ್ದು, ವೇತನ ಕೂಡ ಕಡಿಮೆಯಾಗಿದೆ ಎಂದು ಮನವಿ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

    ಭಾರತ ಸರ್ಕಾರ ಮತ್ತು ಅಂಗನವಾಡಿ ನೌಕರರ ನಡುವೆ ಉದ್ಯೋಗ ಮಾಲೀಕರ ಸಂಬಂಧವಿದೆ. ಆದರೂ ನೌಕರರು ಎಂದೂ ಪರಿಗಣಿಸಲು ಸಾಧ್ಯವಿಲ್ಲ ಎಂಬ ಕೆಳ ಹಂತಗಳ ನ್ಯಾಯಾಲಯದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ಧುಗೊಳಿಸಿದೆ. ಈ ತೀರ್ಪಿನ ಅನ್ವಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಂಗನವಾಡಿ ನೌಕರರ ಗ್ರಾಚ್ಯುಟಿ ಸೌಲೌಭ್ಯ ಅನ್ವಯಿಸಬೇಕು. ಜೊತೆಗೆ ನಿಗದಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು.26 ಸಾವಿರ ಕನಿಷ್ಠ ವೇತನ ಹಾಗೂ 10 ಸಾವಿರ ನಿವೃತ್ತಿ ವೇತನ ನೀಡಬೇಕು. ಹೊಸ ಶಿಕ್ಷಣ ನೀತಿ ಕೈ ಬಿಟ್ಟು ಶಾಲಾ ಪೂರ್ವ ಶಿಕ್ಷಣ ಅಂಗನವಾಡಿ ಮೂಲಕವೇ ನೀಡಬೇಕು ಎಂದು ಒತ್ತಾಯಿಸಿದರು.

    300x250 AD

    ಈ ವೇಳೆ ಜಿಲ್ಲಾ ಸಮಿತಿ ಅಧ್ಯಕ್ಷೆ ಯಮುನಾ ಗಾಂವಕರ್, ತಾಲ್ಲೂಕಾ ಅಧ್ಯಕ್ಷೆ ತಾರಾ ನಾಯ್ಕ, ತಾಲ್ಲೂಕಾ ಖಚಾಂಚಿ ಮಂಜುಳಾ ಕಾಣಕೋಣಕರ್, ತಾಲ್ಲೂಕಾ ಕಾರ್ಯದರ್ಶಿ ಮಾಯಾ ಕಾಣೇಕರ್ ಇದ್ದರು.


    Share This
    300x250 AD
    300x250 AD
    300x250 AD
    Leaderboard Ad
    Back to top