• Slide
    Slide
    Slide
    previous arrow
    next arrow
  • ಮಗನಿಂದಲೇ ತಾಯಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

    300x250 AD

    ದಾಂಡೇಲಿ : ಪಟ್ಟಣದ ಟಿಂಬರ್ ಡಿಪೋ ಪ್ರದೇಶದಲ್ಲಿ ತಾಯಿಯ ಮೇಲೆಯೇ ಮಗನೊಬ್ಬ ಅತ್ಯಾಚಾರ ನಡೆಸಿದ ದುರ್ಘಟನೆ ನಡೆದಿದೆ. ಕುಡಿತದ ದಾಸನಾಗಿರುವ ಮಗ, 24 ವರ್ಷದ ರಾಕಿ ಜಾನ್ ಎಂಬಾತ ಈ ದುಷ್ಕೃತ್ಯ ಎಸಗಿದ ವ್ಯಕ್ತಿ ಎಂದು ತಿಳಿದುಬಂದಿದೆ.

    ರಾತ್ರಿ ಕಂಠ ಪೂರ್ತಿ ಕುಡಿದು ಮನೆಗೆ ಬಂದಿದ್ದ ರಾಕಿ ಜಾನ್ ಗೆ ಊಟ ಮಾಡಿಸಿದ 52 ವರ್ಷದ ತಾಯಿ, ಆನಂತರ ಆತ ಕುಡಿದು ವಾಂತಿ ಮಾಡಿರುವುದನ್ನು ಸ್ವಚ್ಚಗೊಳಿಸಿ ನಿದ್ದೆಗೆ ಜಾರಿದ್ದರು. ಬೆಳಗಿನ ಜಾವ ಮಗ ಮತ್ತೆ ತಾಯಿಯನ್ನು ಕರೆದಿದ್ದು, ಈ ವೇಳೆ ತಾಯಿ ಮಗನನ್ನು ನೋಡಲು ಬಂದಿದ್ದಳು. ಕುಡಿದ ನಶೆಯಲ್ಲಿದ್ದ ಆರೋಪಿ ತಾಯಿಯ ಮೇಲೆಯೇ ಎರಗಿದ್ದಾನೆ.

    300x250 AD

    ಘಟನೆಯಿಂದ ನೊಂದ ತಾಯಿ ಬಾಗಿಲು ಹಾಕಿ ಮನೆಯ ಹೊರಗಡೆ ಬಂದು ಕುಳಿತುಕೊಂಡಿದ್ದಳು. ಅಲ್ಲದೆ, ಮತ್ತೊಂದು ಕೊಠಡಿಯಲ್ಲಿ ಮಲಗಿದ್ದಳು. ಬೆಳಿಗ್ಗೆ 6 ಗಂಟೆ ಸುಮಾರಿಗೆ ಎದ್ದಮಗ, ನನಗೆ ಕೆಲಸಕ್ಕೆ ಹೋಗಬೇಕು ಬಾಗಿಲು ತೆಗಿ ಎಂದು ಹಠ ಹಿಡಿದಿದ್ದಾನೆ. ಮಗನ ಹಟಕ್ಕೆ ಸೋತು ಬಾಗಿಲು ತೆರದಿದ್ದಾಳೆ. ಈ ವೇಳೆ ಮತ್ತೊಮ್ಮೆ ದುಷ್ಕೃತ್ಯ ಎಸಗಿದ್ದಾನೆ. ಅತ್ಯಾಚಾರಕ್ಕೊಳಗಾದ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಗರ ಪೊಲೀಸ್ ಠಾಣೆಯಲ್ಲಿ ಬೆಳಿಗ್ಗೆ ದೂರು ನೀಡಿದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top