ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನ ಮಠದ ನಿಯೋಜಿತ ಪೀಠಾಧಿಪತಿಗಳಾದ ಶ್ರೀ ಮಾಧವಾನಂದ ಭಾರತೀ ಸ್ವಾಮಿಗಳ ಚಾತುರ್ಮಾಸ, ವ್ಯಾಸಪೂಜಾ ಕಾರ್ಯಕ್ರಮಗಳು ಶೃಂಗೇರಿ ಮಹಾಸಂಸ್ಥಾನದಲ್ಲಿ ಬುಧವಾರದಿಂದ(ಜು.13) ಅನಂತಶ್ರೀ ವಿಭೂಷಿತ ಶ್ರೀ ಭಾರತೀತೀರ್ಥ ಮಹಾಸನ್ನಿಧಾನ ಮತ್ತು ತತ್ಕರಕಮಲಸಂಜಾತ ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳವರ ಮಾರ್ಗದರ್ಶನದಲ್ಲಿ ನೆರವೇರಲಿದೆ.
ಶ್ರೀಮನ್ನೆಲೆಮಾವಿನ ಮಠದ ಭಕ್ತರು ಶೃಂಗೇರಿಗೆ ತೆರಳಿ ಜಗದ್ಗುರುಗಳ ದರ್ಶನ ಮತ್ತು ಸೇವೆ ಸಲ್ಲಿಸಲು ಹಾಗೂ ಶ್ರೀ ಮಾಧವಾನಂದ ಭಾರತೀ ಸ್ವಾಮಿಗಳ ದರ್ಶನ ಪಡೆದು ಫಲಸಮರ್ಪಣೆ ಸಲ್ಲಿಸಬಹುದಾಗಿದೆ ಎಂದು ಮಠದ ಅಧ್ಯಕ್ಷ ಜಿ.ಎಂ.ಹೆಗಡೆ ಹೆಗ್ನೂರು ತಿಳಿಸಿದ್ದಾರೆ.
ಜು.13ರಿಂದ ಶ್ರೀಮನ್ನೆಲೆಮಾವಿನ ಮಠ ಶ್ರೀಗಳ ಚಾತುರ್ಮಾಸ್ಯ ವೃತ
