• Slide
    Slide
    Slide
    previous arrow
    next arrow
  • ಭೈರುಂಭೆಯಲ್ಲಿ ಹಿರಣ್ಯಾಕ್ಷ ವಧೆ ಪ್ರಸಂಗ

    300x250 AD

    ಶಿರಸಿ:ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ(ರಿ.) ವೃಂದದವರಿಂದ ಗೆಳೆಯರ ಬಳಗ, ಭೈರುಂಬೆ (ರಿ.) ಇವರ ಸಹಯೋಗದಲ್ಲಿ, ಶ್ರೀಮತಿ ಅನ್ನಪೂರ್ಣ ಲಕ್ಷ್ಮಣ ಹೆಗಡೆ, ಅಮೇರಿಕಾ ಮತ್ತು ಪ್ರವೀಣ ತಿಮ್ಮಪ್ಪ ಹೆಗಡೆ, ಅಮೇರಿಕಾ ಇವರ ಪ್ರಾಯೋಜಕತ್ವದಲ್ಲಿ ಹಿರಣ್ಯಾಕ್ಷ ವಧೆ (ರಚನೆ: ಬಲಿಪ ನಾರಾಯಣ ಭಾಗವತ)ಯಕ್ಷಗಾನ ಪ್ರದರ್ಶನ ನೂತನ ಪ್ರಸಂಗವು ಜು.11 ಸೋಮವಾರದಂದು ಸಂಜೆ 7.00ರಿಂದ ಹುಳಗೋಳ ಸೇವಾ ಸಹಕಾರಿ ಸಂಘದ ಸಭಾಭವನ, ಭೈರುಂಬೆಯಲ್ಲಿ ಪ್ರದರ್ಶನಗೊಳ್ಳಲಿದೆ.
    ಹಿಮ್ಮೆಳದಲ್ಲಿ ಭಾಗವತರು ಅನಂತ ಹೆಗಡೆ, ದಂತಳಿಕೆ, ಮದ್ದಲೆ ನರಸಿಂಹ ಹೆಗಡೆ ಮೂರೂರು, ಚಂಡೆ ಗಜಾನನ ಹೆಗಡೆ ಮೂರೂರು, ಮುಮ್ಮೇಳದಲ್ಲಿ ಶಿವಾನಂದ ಹೆಗಡೆ ಕೆರೆಮನೆ, ತಿಮ್ಮಪ್ಪ ಹೆಗಡೆ ಶಿರಳಗಿ, ಈಶ್ವರ ಭಟ್ಟ ಹಂಸಳ್ಳಿ, ವಿಘ್ನೇಶ್ವರ ಭಟ್ಟ, ಹಾವಗೋಡಿ, ಗೋಕರ್ಣ, ಶ್ರೀಧರ ಹೆಗಡೆ ಕೆರೆಮನೆ, ಚಂದ್ರಶೇಖರ ಎನ್., ಕೃಷ್ಣ ಮರಾಠಿ, ವಿನಾಯಕ ನಾಯ್ಕ ಗುಂಡಿಬೈಲ್, ನಕುಲ ಗೌಡ ಶಿರಸಿ, ಗಣಪತಿ ಕುಣಬಿ, ಸ್ತ್ರೀಪಾತ್ರದಲ್ಲಿ ಸದಾಶಿವ ಭಟ್ಟ ಮಲವಳ್ಳಿ, ಮಹಾವೀರ ಇಂದ್ರ ಜೈನ್, ಹಾಸ್ಯ ಶ್ರೀಧರ ಹೆಗಡೆ ಚಪ್ಪರಮನೆ,ಸೀತಾರಾಮ ಮೂಡಾರೆ ಇರಲಿದ್ದಾರೆ. ವೇಷ ಭೂಷಣ ಸಹಾಯ ಉದಯ ಶೆಟ್ಟಿ ಕರ್ಕಿ, ದಕ್ಷಿಣಾಮೂರ್ತಿ ಹೆಗಡೆ, ಧ್ವನಿ ಮತ್ತು ಬೆಳಕು ಕಾರ್ತಿಕ ಸೌಂಡ್ಸ ಶಿರಸಿ ನಿರ್ವಹಿಸಲಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top