• Slide
    Slide
    Slide
    previous arrow
    next arrow
  • ರಾಜ್ಯಮಟ್ಟದ ಶಿಕ್ಷಕ ಕ್ರೀಡಾಪಟುಗಳಿಗೆ ಅಭಿನಂದನೆ

    300x250 AD

    ಸಿದ್ದಾಪುರ: ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ತಾಲೂಕಿನ ಶಿಕ್ಷಕ ಕ್ರೀಡಾಪಟುಗಳನ್ನು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವತಿಯಿಂದ ಅಭಿನಂದಿಸಲಾಯಿತು.

    ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಸಿ. ಕಾರ್ಯಕ್ರಮ ಉದ್ಘಾಟಿಸಿ ಸಾಧಕ ಶಿಕ್ಷಕರನ್ನು ಗೌರವಿಸಿ, ಪ್ರೋತ್ಸಾಹಿಸುವ ಸಂಘದ ಕಾರ್ಯವನ್ನು ಶ್ಲಾಘಿಸಿದರು. ಅಭಿನಂದನಾ ಪತ್ರ ಪ್ರದಾನ ಮಾಡಿ ಮಾತನಾಡಿದ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ವಸಂತ ಭಂಡಾರಿ, ಶಿಕ್ಷಕರು ರೂಢಿಸಿಕೊಂಡಿರುವ ಸಹಪಠ್ಯ ಚಟುವಟಿಕೆಗಳು ಪರೋಕ್ಷವಾಗಿ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಕಾರಣವಾಗುತ್ತದೆ. ಶಿಕ್ಷಕರ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯ ಇನ್ನಷ್ಟು ಆಗಬೇಕು. ಆ ದಿಶೆಯಲ್ಲಿ ಸಿದ್ದಾಪುರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಾದರಿಯಾಗಿದೆ ಎಂದರು.

    300x250 AD

    ಸಂಘದ ಅಧ್ಯಕ್ಷ ಸತೀಶ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಗುರುರಾಜ ನಾಯ್ಕ, ಉಪಾಧ್ಯಕ್ಷೆ ಮಂಜುಳಾ ಪಟಗಾರ ಇದ್ದರು. ಶಿಕ್ಷಕರಾದ ಶ್ಯಾಮಸಂದರ ಜಿ., ರಂಜನಾ ಭಂಡಾರಿ, ಮಂಜುನಾಥ ನಾಯ್ಕ, ಗಣೇಶ ಪೂಜಾರಿ, ಸುರೇಶ ನಾಯ್ಕ, ಇಸ್ಮಾಯಿಲ್ ಖಾನ್, ಸಂತೋಷ ಅಳ್ವೇಕೋಡಿ, ಅರವಿಂದ ನಾಯ್ಕ, ಅಂಜನ ಮೂರ್ತಿ, ಭಾಸ್ಕರ ಮೊಗೇರ, ಪ್ರಕಾಶ ಬಿ.ಜಿ. ಅಭಿನಂದನೆ ಸ್ವೀಕರಿಸಿದರು. ಜಿ.ಜಿ.ಹೆಗಡೆ, ನಮೃತಾ ಪೈ, ಬಸವರಾಜ ಕಡಪಟ್ಟಿ ನಿರ್ವಹಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top