• first
  second
  third
  previous arrow
  next arrow
 • ಶಿರಸಿಯಲ್ಲಿ 22 ಶಂಕಿತ ಡೆಂಘೀ ಪ್ರಕರಣ: 6 ಜನರಿಗೆ ಡೆಂಘಿ ದೃಢ

  300x250 AD

  ಶಿರಸಿ: ಆರು ಡೆಂಘೀ ಪ್ರಕರಣ ಪತ್ತೆಯಾಗಿರುವ ಕಾರಣ ಪಟ್ಟಣಕ್ಕೆ ಭೇಟಿ ನೀಡಿದ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರಮೇಶರಾವ್, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಹಾಗೂ ತಾಲೂಕಾ ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ ಅವರೊಂದಿಗೆ ಸಮಾಲೋಚನೆ ನಡೆಸಿದರು.

  ಶಿರಸಿಯಲ್ಲಿ ಇದುವರೆಗೂ 22 ಶಂಕಿತ ಡೆಂಘೀ ಪ್ರಕರಣ ಕಂಡುಬಂದಿದ್ದು, ಇದರಲ್ಲಿ ಆರು ಜನರಲ್ಲಿ ಡೆಂಘೀ ಇರುವುದು ದೃಢಪಟ್ಟಿದೆ. ಇಲಾಖೆಯು ನಗರಸಭೆಯ ಸಹಯೋಗದೊಂದಿಗೆ ಜನರಲ್ಲಿ ಜಾಗ್ರತೆ ಮೂಡಿಸಲು ಡೆಂಘೀ ವಿರೋಧಿ ದಿನವನ್ನು ಇದೇ ತಿಂಗಳಲ್ಲಿ ಆಚರಣೆ ಮಾಡಲಾಗುವುದು. ಈಗಾಗಲೇ ಮುಂಜಾಗ್ರತ ಕ್ರಮವಾಗಿ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಸಹಾಯ ಪಡೆದು ಮುಖ್ಯವಾಗಿ ಮನೆಯೊಳಗೆ ನೀರನ್ನು ಯಾವ ರೀತಿಯಲ್ಲಿ ಸಂಗ್ರಹಿಸಿಡಲಾಗಿದೆ ಎನ್ನುವದನ್ನು ಮೊದಲು ಪರಿಶೀಲಿಸುತ್ತಿದ್ದಾರೆಂದು ಡಾ.ರಮೇಶರಾವ್ ಹೇಳಿದರು.

  300x250 AD

  ಯಾರಿಗಾದರೂ ಸಣ್ಣ ಜ್ವರ, ಥಂಡಿ, ಕೆಮ್ಮು, ಕಫ ಕಂಡುಬಂದರೆ ಮೊದಲು ಹತ್ತಿರದ ವೈದ್ಯರನ್ನು ಭೇಟಿಯಾಗಿ ಎಂದು ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Back to top