Slide
Slide
Slide
previous arrow
next arrow

ದಿವ್ಯಾಂಗ ಮಕ್ಕಳ ಶಾಲೆಗೆ ಲಯನ್ಸ ಶಾಲೆಯ ಲಿಯೋ ಕ್ಲಬ್ ಭೇಟಿ

300x250 AD

ಶಿರಸಿ: ನಗರದ ಬನವಾಸಿ ರಸ್ತೆಯಲ್ಲಿರುವ ಮಹಾದೇವ ಭಟ್ಟ ಕೂರ್ಸೆ ಕಿವುಡು ಮಕ್ಕಳ ಶಾಲೆಗೆ ಇತ್ತೀಚೆಗೆ ಶಿರಸಿ ಲಿಯೋ ಕ್ಲಬ್ ಸದಸ್ಯರುಗಳು ಭೇಟಿ ನೀಡಿ ಅಲ್ಲಿನ ಮಕ್ಕಳ ಜೊತೆಯಲ್ಲಿ ಕೆಲ ಸಮಯ ಕಳೆದು ಮಕ್ಕಳ ಕಾರ್ಯ ಸಾಧನೆಗಳನ್ನು, ಕಲಿಕಾ ಬಗೆಯನ್ನು ವೀಕ್ಷಣೆ ಮಾಡಿ ಸಂಭ್ರಮಿಸಿದರು. ಲಿಯೋ ಅಧ್ಯಕ್ಷೆ ಸ್ತುತಿ ತುಂಬಾಡಿ ಮಾತನಾಡಿ, ಉಳಿದೆಲ್ಲ ಮಕ್ಕಳ ರೀತಿಯಲ್ಲಿಯೇ ಇರುವ ಅವರ ಕಲಿಕಾ ಸಾಮರ್ಥ್ಯವನ್ನು, ಚಟುವಟಿಕೆಗಳನ್ನೂ ಶ್ಲಾಘಿಸಿ, ಶುಭ ಹಾರೈಸಿದರು. ಲಿಯೋ ಸದಸ್ಯರುಗಳು ತರಗತಿಗಳಿಗೆ ಭೇಟಿ ನೀಡಿ ಆಯಾ ವರ್ಗದ ಮಕ್ಕಳ ಕಲಿಕಾ ಶೈಲಿಯನ್ನು ವೀಕ್ಷಣೆ ಮಾಡಿ, ಅವರ ಜೊತೆಯಲ್ಲಿ ತಾವೂ ಅವರದೇ ಶೈಲಿಯಲ್ಲಿ ಮಾತನಾಡಿ ಸಂಭ್ರಮಿಸಿದರು.
ಲಿಯೋ ಅಡ್ವೈಸರ್ ಲಯನ್ ವಿನಯ್ ಹೆಗಡೆ ಅವರು ಅಲ್ಲಿನ ಮಕ್ಕಳ ಕಲಿಕೆ ಯಾವ ರೀತಿಯಲ್ಲಿ ನಡೆಯುವುದೆಂಬುದನ್ನು ಅಲ್ಲಿನ ಶಿಕ್ಷಕರಲ್ಲಿ ಮಾತನಾಡಿ ಮಾಹಿತಿಗಳನ್ನು ಪಡೆದುಕೊಂಡರು. ಅಲ್ಲಿನ ಕಾರ್ಯಾಲಯದ ವ್ಯವಸ್ಥೆಗಳನ್ನು ನೋಡಿಕೊಳ್ಳುವ ಜನಾರ್ಧನ್ ಯಾವ ರೀತಿಯಲ್ಲಿ ಅಲ್ಲಿನ ವ್ಯವಸ್ಥೆ ಸುಗಮವಾಗಿ ಸಾಗುತ್ತಿದೆ ಎಂಬುದನ್ನು ತಿಳಿಸಿಕೊಟ್ಟರು. ಅಲ್ಲಿನ ಇತರೆ ಶಿಕ್ಷಕವೃಂದ, ಸಿಬ್ಬಂದಿ ವರ್ಗದವರು ಯಾವ ರೀತಿಯಲ್ಲಿ ಸನ್ನೆಗಳ ಮೂಲಕ ಮಕ್ಕಳ ಜೊತೆಯಲ್ಲಿ ಸಂಭಾಷಣೆಯನ್ನು, ವಿಷಯಗಳನ್ನು ಅರಿಕೆ ಮಾಡಿಕೊಡುವ ಬಗೆಯನ್ನು ವಿವರಿಸಿದರು. ಮಹಾದೇವ ಭಟ್ಟ ಕೂರ್ಸೆ ಕಿವುಡು ಮಕ್ಕಳ ಶಾಲೆಯ ಖಜಾಂಚಿಗಳಾದ ಲಯನ್ ಲೋಕೇಶ್ ಹೆಗಡೆಯವರು ಮಾತನಾಡಿ ಅಲ್ಲಿನ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುವ ಅಲ್ಲಿನ ಸಿಬ್ಬಂದಿ ವರ್ಗದವರ ಕಾರ್ಯವನ್ನು ಶ್ಲಾಘಿಸಿ, ಮಕ್ಕಳಿಗೆ ಸಿಹಿ ವಿತರಣೆ ಮಾಡಿದರು.

ಲಿಯೋ ಕ್ಷಮಾ ಗುಡಿಗಾರ್ ಕಿವುಡು ಮಕ್ಕಳ ಶಾಲೆಗೆ ವೈಯಕ್ತಿಕವಾಗಿ ರೂಪಾಯಿ 2,500 ಗಳ ಚೆಕ್ ಮೂಲಕ ಶಾಲೆಗೆ ದೇಣಿಗೆ ನೀಡಿದರು.ಲಿಯೋ ಸದಸ್ಯರುಗಳಿಂದ ಸಂಗ್ರಹಗೊಂಡ 5,000 ರೂ. ಗಳನ್ನು ನಗದು ರೂಪದಲ್ಲಿ ದೇಣಿಗೆ ನೀಡಲಾಯಿತು.
ಲಿಯೋ ಪದಾಧಿಕಾರಿಗಳಾದ ವಾಸವಿ ಜೋಷಿ, ಲಿಯೋ ತೈಬಾ ತಬಸ್ಸುಮ್,ಕೋಆರ್ಡಿನೇಟರ್ ಶ್ರೀಮತಿ ಸೀತಾ ವಿ. ಭಟ್ ಇವರುಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top