Slide
Slide
Slide
previous arrow
next arrow

ವಚನ ಸಾಹಿತ್ಯಕ್ಕೆ ಡಾ.ಫ.ಗು.ಹಳಕಟ್ಟಿ ಕೊಡುಗೆ ಅಪಾರ: ಸಾಜಿದ್ ಮುಲ್ಲಾ

300x250 AD

ಕಾರವಾರ: ಡಾ. ಫ.ಗು ಹಳಕಟ್ಟಿಯವರು ವಚನಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಪ್ರಕಟಿಸುವ ಮೂಲಕ ಕರ್ನಾಟಕದ ವಚನ ಸಾಹಿತ್ಯ ಕ್ಷೇತ್ರ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಡಾ. ಫ.ಗು. ಹಳ್ಳಕಟ್ಟಿಯವರ ಜನ್ಮ ದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಫ.ಗು. ಹಳಕಟ್ಟಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಡಾ. ಫ.ಗು ಹಳಕಟ್ಟಿ ವಚನಕಾರರು ಅಲ್ಲದಿದ್ದರೂ, ವಚನ ಸಾಹಿತಿಗಳು ತಾಳೆಗರಿ, ತಾಮ್ರ, ಕಲ್ಲು ಬಂಡೆಗಳಲ್ಲಿ, ಹಾಳೆಯ ಮೇಲೆ ರಚಿಸಿದ ವಚನಗಳನ್ನು ಸಂಗ್ರಹಿಸಿ, ಅವುಗಳನ್ನು ಪ್ರಕಟಿಸಲು ತಮ್ಮ ಸ್ವಂತ ಮನೆಯನ್ನು ಮಾರಾಟಮಾಡಿ ಮುದ್ರಣಾಲಯವನ್ನು ಸ್ಥಾಪಿಸಿ ವಚನಗಳನ್ನು ಮುದ್ರಿಸಿ ಜನಸಾಮಾನ್ಯರಿಗೆ ಒದಗಿಸಿದ ಮಹಾನ್ ವ್ಯಕ್ತಿ ಎಂದು ಹೇಳಿದರು.

300x250 AD

ಇಂತಹ ಮಹಾನ್ ವ್ಯಕ್ತಿಗಳ, ಸಮಾಜದ ಏಳಿಗೆಗೋಸ್ಕರ, ದೀನ ದಲಿತರಿಗಾಗಿ, ಸಾಹಿತ್ಯಕ್ಕಾಗಿ ನಾಡು ದೇಶಕ್ಕಾಗಿ ಅವರು ನೀಡಿದ ಕೊಡೆಗೆಯನ್ನು ಮತ್ತು ಅವರ ಸಾಧನೆ, ನಡೆದುಬಂದ ದಾರಿಯನ್ನು ಜನಸಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಸರ್ಕಾರ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರ ಸದುಪಯೋಗ ಪಡೆದುಕೊಂಡು ಮಹಾನ್ ವ್ಯಕ್ತಿಗಳು ಸಾಧನೆ ಅರಿತುಕೊಂಡು ಅವರು ನಡೆದುಬಂದ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಶಿಕ್ಷಕ ದಿನೇಶ್ ಕಿನ್ನರ, ಹತ್ತು ಸಾವಿರಕ್ಕೂ ಹೆಚ್ಚು ವಚನಗಳನ್ನು ಸಂಗ್ರಹಿಸಿ ತಿದ್ದಿ. ತೀಡಿ ಪರಿಷ್ಕರಣೆ ಮಾಡಿ , ಮುದ್ರಿಸಿ ಜನರಿಗೆ ಆರ್ಪಿಸಿರುವಂತ ಮಹಾನ್ ವ್ಯಕ್ತಿ ಡಾ. ಫ.ಗು ಹಳಕಟ್ಟಿಯವರು, ಇವರಿಗೆ ವಚನ ಪಿತಾಮಹ, ಬರಿಗೈ ಫಕೀರ, ಅರಿದ ಅಂಗಿಯ ಫಕೀರ, ಕರ್ನಾಟಕದ ಮ್ಯಾಕ್ಸ್ ಮುಲ್ಲಾರ್ ಎಂಬ ಬಿರುದುಗಳನ್ನು ಪಡೆದುಕೊಂಡಿದ್ದು, ಕರ್ನಾಟಕ ವಿಶ್ವವಿದ್ಯಾಲಯ 1956 ರಲ್ಲಿ ಅವರ ಜನಮಾನಸದ ಸೇವೆ ಮತ್ತು ಶರಣ ಸಾಹಿತ್ಯ ಸಂಗ್ರಹಣೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದೆ. ಬಿಜಾಪುರದಲ್ಲಿ ಭೀತಾನಾಳ ಕೆರೆಯನ್ನು ಕಟ್ಟಿಸುವುದು ಮಾತ್ರವಲ್ಲದೇ , ಬಿಎಲ್‌ಡಿಇ ಸಂಸ್ಥೆ, ಸಿದ್ದೇಶ್ವರ ಸಂಘ, ಶ್ರೀ. ಸಿದ್ದೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಸ್ಥಾಪಿಸಿ , ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಜನರ ಸೇವೆಯನ್ನು ಮಾಡುತ್ತಾ ಅನೇಕ ಸಂಘಟನೆಗಳೊಂದಿಗೆ ಸದೃಢ ಸಮಾಜದ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಸ್ವಾಗತಿಸಿದರು, ಶಿಕ್ಷಕ ಮಹಾದೇವ ರಾಣೆ ನಿರೂಪಿಸಿ, ವಂದಿಸಿದರು.

Share This
300x250 AD
300x250 AD
300x250 AD
Back to top