ಸಿದ್ದಾಪುರ : ಅಂಗನವಾಡಿ ಕಾರ್ಯಕರ್ತೆಯರು ಗೌರವಧನ ಕಾರ್ಯಕರ್ತೆಯರಾಗಿದ್ದು ಯಾವುದೇ ಗ್ರೂಪ್ ನೌಕರರಾಗಿರುವುದಿಲ್ಲ, ಬಿಎಲ್ಓ ಕೆಲಸವನ್ನ ‘ಸಿ’ ದರ್ಜೆ ನೌಕರರಿಗೆ ವರ್ಗಾಯಿಸಬೇಕು, ಅಂಗನವಾಡಿ ಇಲಾಖೆಯಲ್ಲಿ ಪೋಶನ್ ಟ್ರ್ಯಾಕರ್,3 -6 ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ, ಆಹಾರ ವಿತರಣೆ, ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಯೋಜನೆ ಮಾತೃ ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಹಲವಾರು ಕೆಲಸದ ಒತ್ತಡಗಳು ತುಂಬಾ ಇರುವುದರಿಂದ ಬಿಎಲ್ಓ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವಾತಂತ್ರ್ಯ ಸಂಘಟನೆ ತಾಲೂಕ ಸಮಿತಿ ಸಿದ್ದಾಪುರ ಇವರು ತಹಸೀಲ್ದಾರ್‌ರಿಗೆ ಮನವಿ ನೀಡಿದ್ದಾರೆ.
ಭಾರತ ಚುನಾವಣಾ ಆಯೋಗದ ಆದೇಶದ ಪ್ರಕಾರ ಸರ್ಕಾರದ ಯಾವುದೇ ಗ್ರೂಪ್ ‘ಸಿ’ ಮತ್ತು ಅದಕ್ಕಿಂತ ಹೆಚ್ಚಿನ ನಿಯಮಿತ ಸೇವೆ ಸಲ್ಲಿಸುವ ನೌಕರರನ್ನು ಬಿಎಲ್ಒ ಆಗಿ ನೇಮಿಸಬೇಕೆಂದು ಕೋರ್ಟ್ ಆದೇಶ ಆಗಿದ್ದು ಸರಕಾರಿ ನೌಕರರಿಗೆ ಸಿಗುವ ಸೌಲಭ್ಯಗಳು ನಮ್ಮ ಕಾರ್ಯಕರ್ತರಿಗೆ ಸಿಗುವುದಿಲ್ಲ ನಮ್ಮ ಅಂಗನವಾಡಿ ಕಾರ್ಯಕರ್ತೆಯರನ್ನು ‘ಸಿ’ ದರ್ಜೆಯ ನೌಕರರೆಂದು ಪರಿಗಣಿಸಿ ತದನಂತರ ಬಿಎಲ್ಓ ಕೆಲಸವನ್ನು ನಿರ್ವಹಿಸಲು ಅವಕಾಶ ಮಾಡಿಕೊಡಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷೆ ಯಮುನಾ ಬಿ. ನಾಯ್ಕ್,
ಖಜಾಂಚಿ ಶೋಭಾ ಎಸ್ ನಾಯ್ಕ್,ಕಾರ್ಯದರ್ಶಿ ಸುಮಂಗಲ ಹೆಗಡೆ,ಉಪಾಧ್ಯಕ್ಷೆ ಪ್ರಭಾವತಿ ನಾಯ್ಕ್
ಸಹ ಕಾರ್ಯದರ್ಶಿ ರೇಖಾ ಭಟ್, ಕಾರ್ಯಕರ್ತರು ಉಪಸ್ಥಿತರಿದ್ದರು