ಹೊನ್ನಾವರ: ಪಟ್ಟಣದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಸೆಂಟ್ರಲ್ ಶಾಲೆಯಲ್ಲಿ ನೂತನ ಲಿಫ್ಟ್ ಉದ್ಘಾಟನೆ ನಡೆಯಿತು. ರಾಮಕೃಷ್ಣ ಭಟ್,ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಸ್ಕಾಂ,ಹೊನ್ನಾವರ ಇವರು ಲಿಫ್ಟ್ ಉದ್ಘಾಟನೆ ನೆರವೇರಿಸಿದರು. ಎಂ.ಪಿ.ಇ.ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ, ಕಾರ್ಯದರ್ಶಿ ಎಸ್.ಎಮ್.ಭಟ್, ಜಂಟಿ ಕಾರ್ಯದರ್ಶಿ ಜಿ.ಪಿ.ಹೆಗಡೆ, ಸದಸ್ಯ ಎಸ್.ಎಸ್.ಹೆಗಡೆ, ಶಾಲೆಯ ಪ್ರಾಚಾರ್ಯೆ ಡಾ.ವಿಜಯಲಕ್ಷ್ಮಿ ನಾಯ್ಕ, ಸ್ಮಾರ್ಟ್ ಟೆಕ್ ಎಲೆವೇಟರ್ಸ್ ಸಿಬ್ಬಂದಿಗಳು, ಕಾಲೇಜಿನ ಹಿತೈಷಿ ಉಷಾ ಶಾಸ್ತ್ರಿ ಮತ್ತು ಇನ್ನಿತರರು ಈ ವೇಳೆ ಹಾಜರಿದ್ದರು.
ನೂತನ ಲಿಫ್ಟ್ ಉದ್ಘಾಟನೆ
