ಅಂಕೋಲಾ: ರಾಜ್ಯದ ಪ್ರತಿಯೊಂದು ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿನ ಒಂದು ಉಪ ನೋಂದಣಿ ಕಚೇರಿಗಳು ಸರದಿಯ ಆಧಾರದ ಮೇಲೆ 2 ನೇ ಶನಿವಾರ , 4 ನೇ ಶನಿವಾರ ಮತ್ತು ಭಾನುವಾರಗಳಂದು ಕರ್ತವ್ಯ ನಿರ್ವಹಿಸಬೇಕಾಗುತ್ತದೆ.
ಅದರಂತೆ ಜೂ.8 ರ ಭಾನುವಾರದಂದು ಅಂಕೋಲಾ ಉಪ ನೋಂದಣಿ ಕಛೇರಿಯು ನೋಂದಣಿ ಸೇವೆಗಾಗಿ ತೆರಯಲಿದ್ದು, ಜಿಲ್ಲೆಯ ಸಾರ್ವಜನಿಕರು ಇದರ ಸದುಉಪಯೋಗ ಪಡೆದುಕೊಳ್ಳುವಂತೆ ಹಾಗೂ ಸದರಿ ಕಚೇರಿಗೆ ಜೂ.10 ರಂದು ರಜಾ ದಿನವಿರುತ್ತದೆ ಎಂದು ಜಿಲ್ಲಾ ನೋಂದಣಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಕೋಲಾ ಉಪ ನೊಂದಣಿ ಕಚೇರಿ ಭಾನುವಾರ ಕಾರ್ಯ ನಿರ್ವಹಣೆ
