ಜೋಯಿಡಾ: ತಾಲೂಕಿನ ನಂದಿಗ್ರಾಮದ ಹೆಸರಾಂತ ಸುಗಮ ಸಂಗೀತ ಗಾಯಕ ದಯಾನಂದ ದಾನಗೇರಿ ಮತ್ತು ಯಕ್ಷಗಾನ ಕಲಾವಿದೆ ಸುಜಾತಾ ದಂಪತಿಗಳ ಸುಪುತ್ರ ಪ್ರಾಥಮಿಕ ವಿದ್ಯಾರ್ಥಿ ಕುಮಾರ ಸಾತ್ವಿಕ ದಾನಗೇರಿ ಸಹ ಉತ್ತಮ ಭಾವಗೀತಾ ಗಾಯಕನಾಗಿ ಹೊರ ಹೊಮ್ಮುತ್ತಿದ್ದಾನೆ. ಬಾಲಕರನ್ನು ಆರಂಭದಲ್ಲೇ ಪ್ರೋತ್ಸಾಹಿಸಿದರೆ ಭವಿಷ್ಯದಲ್ಲಿ ನಾಡಿನ ಆಸ್ತಿಯಾಗಬಲ್ಲ. ಆ ಕಾರಣಕ್ಕಾಗಿ ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆಯಿಂದ ನಿನ್ನೆ ಪದ್ಮಭೂಷಣ ಪುಟ್ಟರಾಜ ಕೃಪಾ ಗೌರವ ನೀಡಿ ಸನ್ಮಾನಿಸಲಾಯಿತು. ವಿಶ್ವನಾಥ ಭಾಗ್ವತ್, ಮಾಸ್ಕೇರಿ ನಾಯಕ, ದಾನಗೇರಿ ಕುಟುಂಬದವರು ಉಪಸ್ಥಿತರಿದ್ದರು.
ಬಾಲಕ ಸಾತ್ವಿಕ ದಾನಗೇರಿಗೆ ಗೌರವ ಪುರಸ್ಕಾರ
