ದಾಂಡೇಲಿ : ಹೆಜ್ಜೇನು ದಾಳಿಯಿಂದ ಮೂವರಿಗೆ ಗಾಯವಾದ ಘಟನೆ ನಗರದ ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರ ಬುಧವಾರ ಮಧ್ಯಾಹ್ನ ನಡೆದಿದೆ.
ಹಳಿಯಾಳ ರಸ್ತೆಯ 3ನಂ. ಗೇಟ್ ಹತ್ತಿರದ ನಿವಾಸಿಗಳಾದ ಮಹಮ್ಮದ್ ಇಸಾಕ್, ಬಹದ್ದೂರ್ ಖಾನ್ ಮತ್ತು ಮನೋಜ್ ಕುಮಾರ್ ಇವರು ಹೆಜ್ಜೇನು ದಾಳಿಯಿಂದ ಗಾಯಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಏಕಾಏಕಿ ಹೆಜ್ಜೇನು ದಾಳಿ ಮಾಡಿದ ಪರಿಣಾಮವಾಗಿ ಅಲ್ಲಿದ್ದ ಜನರು ದಿಕ್ಕಪಾಲಾಗಿ ಓಡಿಹೋಗಿ, ಹೆಜ್ಜೇನು ದಾಳಿಯಿಂದ ರಕ್ಷಿಸಿ ಕೊಂಡಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.