ದಾಂಡೇಲಿ : ನಗರದ ನೀರು ಸರಬರಾಜು ಘಟಕದ ಮುಖ್ಯ ಪೈಪ್ ಲೈನ್ ನಲ್ಲಿ ಹೆಚ್ಚಿನ ಪ್ರಮಾಣದ ನೀರು ಸೋರಿಕೆಯಾಗಿ ಪೋಲಾಗುತ್ತಿದ್ದು, ಅದನ್ನು ಶೀಘ್ರದಲ್ಲಿ ದುರಸ್ತಿ ಮಾಡಬೇಕಾಗಿರುತ್ತದೆ. ನೀರು ಸರಬರಾಜು ಘಟಕದ ಮುಖ್ಯ ಪೈಪ್ ಲೈನ್ ದುರಸ್ತಿ ನಿಮಿತ್ತ ಮಾರ್ಚ್: 19 ಮತ್ತು ಮಾರ್ಚ್: 20 ರಂದು ಒಟ್ಟು ಎರಡು ದಿನಗಳವರೆಗೆ ದಾಂಡೇಲಿ ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತರಾದ ವಿವೇಕ್ ಬನ್ನೆ ಅವರು ಸೋಮವಾರ ನಗರಸಭೆಯಲ್ಲಿ ಮಾಧ್ಯಮದ ಮೂಲಕ ಸಾರ್ವಜನಿಕರಿಗೆ ಮನವಿಯನ್ನು ಮಾಡಿದ್ದಾರೆ.
ಮಾ. 19, 20 ರಂದು ದಾಂಡೇಲಿ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ : ವಿವೇಕ್ ಬನ್ನೆ
