Slide
Slide
Slide
previous arrow
next arrow

ಗ್ರಾಮೀಣ ಜನರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ನೀರು ಪೂರೈಕೆ ಮಾಡಲು‌ ಸೂಚನೆ

300x250 AD

ಕಾರವಾರ:ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕಾರವಾರ ಇವರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಗಳನ್ನು ಉತ್ತಮ ಅನುಷ್ಠಾನಕ್ಕಾಗಿ WASH ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತು ನಡೆದ ಒಂದು ದಿನದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರಕ್ಕೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಆಡಳಿತ) ನಾಗೇಶ್ ರಾಯ್ಕರ್ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ಗ್ರಾಮೀಣ ಜನರಿಗೆ 2030 ಒಳಗೆ ಸುರಕ್ಷಿತವಾದ ಮತ್ತು ಗುಣಮಟ್ಟದ ನೀರನ್ನು ಪೂರೈಕೆ ಮಾಡಬೇಕು, ನೀರನ್ನು ಹಿತ ಮಿತವಾಗಿ ಬಳಸುವುದು ಅತಿ ಮುಖ್ಯವಾಗಿದೆ ಹಾಗೂ ಎಎಒ ಮತ್ತು ಎಸ್.ಬಿ.ಎಂ ಯೋಜನೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮರ್ಪಕವಾಗಿ ಅನುಷ್ಠಾನÀ ಮಾಡುವ ಜವಾಬ್ದಾರಿ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು, ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಉಪಕಾರ್ಯದರ್ಶಿ (ಆಡಳಿತ) ಜಾಫರ್‌ಶರೀಫ್ ಸುತಾರ ರವರು ರಾಜ್ಯ ಕಛೇರಿಯಿಂದ ವೀಡಿಯೋ ಸಂವಾದದ ಮೂಲಕ ಕಾರ್ಯಾಗಾರದಲ್ಲಿ ಜಲ ಜೀವನ ಮಿಷನ್ ಯೋಜನೆಯ ಸಮರ್ಪಕವಾದ ಅನುಷ್ಠಾನ ಕುರಿತು ಮಾಹಿತಿ ನೀಡಿದರು.

300x250 AD

ಈ ಸಂದರ್ಭದಲ್ಲಿ ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ, ಸಹಾಯಕ ಕಾರ್ಯದರ್ಶಿ ಆಡಳಿತ ಅಧಿಕಾರಿ ಸುನೀಲ್ ನಾಯ್ಕ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು, ಜೂನಿಯರ್ ಇಂಜಿನಿಯರ್ ರವರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು, ಆರ್ ಡಬ್ಲ್ಯೂ ಎಸ್ ವಿಭಾಗದ ಎಲ್ಲಾ ಎಇಎಸ್/ಜೆಇಎಸ್ ಜಿಲ್ಲಾ ಎಎಒ DPM ಮತ್ತು PMU WASH ಸಮಾಲೋಚಕರು, DTSU ಜಿಲ್ಲಾ ಸಮಾಲೋಚಕರು, ಜಿಲ್ಲಾ ಹಾಗೂ ತಾಲ್ಲೂಕು ಲ್ಯಾಬ್ ಸಂಯೋಜಕರು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top