ಶಿರಸಿ: ನಗರದ ಆದರ್ಶ ವನಿತಾ ಸಮಾಜದಲ್ಲಿ ಸುವರ್ಣ ಮಹೋತ್ಸವದ ನಿಮಿತ್ತ ಸಂಘಟನೆಯ ಸದಸ್ಯರುಗಳಿಗಾಗಿ ಜನಪದಗೀತೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ಹಾಡಿನ ಸ್ಪರ್ಧೆಯಲ್ಲಿ ಭಾಗವಹಿಸಿದ ಆದರ್ಶ ವನಿತಾ ಸಮಾಜ ಸದಸ್ಯೆಯರು ತಮ್ಮ ಪ್ರತಿಭೆ ಬಿಂಬಿಸಿ ಸಂಭ್ರಮಿಸಿದರು.
ವನಜಾ ಬೆಳಗಾವ್ಕರ್ (ಪ್ರಥಮ), ಭವಾನಿ ಭಟ್ (ದ್ವಿತೀಯ), ಜ್ಯೋತಿ ಹೆಗಡೆ (ತೃತೀಯ), ಭಾರತಿ ಹೆಗಡೆ ಸಮಾಧಾನಕರ ಬಹುಮಾನ ಪಡೆದರು. ನಿರ್ಣಾಯಕರಾಗಿ ಶ್ರೀಲತಾ ಹೆಗಡೆ ಹೆಗ್ಗರ್ಸಿಮನೆ ಹಾಗು ಗೀತಾ ಹೆಗಡೆ ಮುಂಡಿಗೇಸರ ಕಾರ್ಯನಿರ್ವಹಿಸಿದರು. ಗೀತಾ ಹೆಗಡೆ ಸ್ವರಚಿತ ಸ್ವಾಗತ ಗೀತೆ ಹಾಡಿದರು. ಸಂಸ್ಥೆಯ ಅಧ್ಯಕ್ಷೆ ಮಂಗಲಾ ಹಬ್ಬು ಸ್ವಾಗತಿಸಿದರು. ಉಪಾಧ್ಯಕ್ಷೆ ರೇಖಾ ಭಟ್ಟ ಪರಿಚಯಿಸಿದರು. ಕಾರ್ಯದರ್ಶಿ ಸಹನಾ ಜೋಶಿ ನಿರೂಪಿಸಿದರು.
ವನಿತಾ ಸಮಾಜದಲ್ಲಿ ಜಾನಪದಗೀತೆ ಸ್ಪರ್ಧೆ
