ಶಿರಸಿ: ಮಹಾ ಶಿವರಾತ್ರಿ ಪ್ರಯುಕ್ತ ತಾಲೂಕಿನ ಸಾಲ್ಕಣಿ ಗ್ರಾಮ ಪಂಚಾಯತ್ ಮುರೇಗಾರ ಜಲಪಾತ ಶರ್ಲಬೈಲಗೆ ಬುಧವಾರ ಬೆಳಗ್ಗಿನಿಂದಲೇ ಪ್ರತಿ ವರ್ಷದಂತೆ ಶಿವರಾತ್ರಿ ಪ್ರಯುಕ್ತ ಸುತ್ತಮುತ್ತಲಿನ ಸಾವಿರಾರು ಜನರು ಆಗಮಿಸಿ ಶಿವಲಿಂಗಕ್ಕೆ ಪೂಜೆ ಮಾಡಿ ಶಿವರಾತ್ರಿ ಹಬ್ಬ ಆಚರಿಸಿದರು. ಈ ಸ್ಥಳವು ಪಾಂಡವರ ಕಾಲದಿಂದ ಇತಿಹಾಸ ಹೊಂದಿದ ಸ್ಥಳವಾಗಿರುತ್ತದೆ. ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಚಂದ್ರು ನಾಯ್ಕ್, ಫಾರೆಸ್ಟ್ ಇಲಾಖೆ ಸಿಬ್ಬಂದಿಗಳಾದ ರವಿ ಡಿ., ವೀರಣ್ಣ ಎಲಿಗಾರ ಇವರು ಉಪಸ್ಥಿತರಿದ್ದು ಸಾರ್ವಜನಿಕರಿಗೆ ಸಹಕರಿಸಿದರು.
ಮುರೇಗಾರ ಜಲಪಾತದಲ್ಲಿ ಮಹಾಶಿವರಾತ್ರಿ ಆಚರಣೆ
