ಕುಮಟಾ: ಗೋಕರ್ಣ ಜಾತ್ರೆಯ ನಿಮಿತ್ತ ಪ್ರಯಾಣಿಕರ ಅನುಕೂಲಕ್ಕಾಗಿ ವಾಕರಸಾಸಂಸ್ಥೆ ಉತ್ತರ ಕನ್ನಡ ವಿಭಾಗದಿಂದ ಈ ಮುಂದಿನಂತೆ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಮಾಡಿದೆ.
ಸಾರ್ವಜನಿಕರು ಸದರಿ ವಿಶೇಷ ಸಾರಿಗೆ ಕಾರ್ಯಾಚರಣೆಯ ಉಪಯೋಗವನ್ನು ಪಡೆದುಕೊಳ್ಳಲು ಹಾಗೂ ಭಕ್ತಾಧಿಗಳು ಸುರಕ್ಷಿತ ಮತ್ತು ಸುಖಕರ ಪ್ರಯಾಣಕ್ಕಾಗಿ ಸಂಸ್ಥೆಯ ಬಸ್ಸುಗಳಲ್ಲಿಯೇ ಪ್ರಯಾಣಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ವಾಕರಸಾಸಂಸ್ಥೆ ಉಕ ವಿಭಾಗ,ಶಿರಸಿ ಅವರ ಪ್ರಕಟಣೆ ತಿಳಿಸಿದೆ.
ವೇಗದೂತ ಮಾರ್ಗ :
- ಬೆಳಗಾವಿ-ಗೋಕರ್ಣ
- ಹುಬ್ಬಳ್ಳಿ-ಗೋಕರ್ಣ
- ಮಡಗಾಂವ-ಗೋಕರ್ಣ
- ಕಾರವಾರ-ಗೋಕರ್ಣ
- ಕುಮಟಾ -ಗೋಕರ್ಣ
- ಅಂಕೋಲಾ-ಗೋಕರ್ಣ
ಸಾಮಾನ್ಯ ಮಾರ್ಗ;
- ಗೋಕರ್ಣ-ಅಗ್ರಗೋಣ
- ಗೋಕರ್ಣ-ಬೇಲೆಖಾನ
- ಗೋಕರ್ಣ-ಗಂಗೆಕೊಳ್ಳ
- ಗೋಕರ್ಣ-ಗಂಗಾವಳಿ
- ಗೋಕರ್ಣ-ಜೂಗ
- ಗೋಕರ್ಣ-ಮಾದನಗೆರೆ