ಹೊನ್ನಾವರ : ತಾಲೂಕಿನ ಪ್ರತಿಷ್ಟಿತ ಹಡಿನಬಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆ ಫಲಿತಾಂಶ ರವಿವಾರ ಪ್ರಕಟಗೊಂಡಿದೆ.
ಚುನಾವಣೆ ನಡೆದು ಎರಡು ತಿಂಗಳು ಕಳೆದರೂ ಫಲಿತಾಂಶ ಪ್ರಕಟವಾಗಿರಲಿಲ್ಲ. ನ್ಯಾಯಾಲಯದ ಅನುಮತಿ ಪಡೆದು ಹೆಚ್ಚುವರಿ ಮತ ತಂದಿರುವುದರಿಂದ, ನ್ಯಾಯಾಲಯದ ತೀರ್ಪಿನ ನಂತರ ರವಿವಾರ ಮತ ಏಣಿಕೆ ನಡೆದು ಫಲಿತಾಂಶ ಹೊರ ಬಿದ್ದಿದೆ.
ಸಂಸ್ಥೆಯ ಹಾಲಿ ಅಧ್ಯಕ್ಷರಾಗಿದ್ದ ಹರಿಯಪ್ಪ ವಿ. ನಾಯ್ಕ, ರಾಮಕೃಷ್ಣ ವಿ. ನಾಯ್ಕ, ಮಂಜುನಾಥ ಹೆಗಡೆ, ಈಶ್ವರ ಗೌಡ, ಹರೀಶ ನಾಯ್ಕ, ಉಮೇಶ ನಾಯ್ಕ, ಹೆಂಡ್ರಿಕ್ ರೊಡ್ರಗೀಸ್, ಬಾಬು ಹಳ್ಳೇರ್, ಶೋಭಾ ಅಣ್ಣಪ್ಪ ಗೌಡ, ಸವಿತಾ ಶಂಕರ ನಾಯ್ಕ, ಪ್ರದೀಪ ಚಂದ್ರಹಾಸ ನಾಯ್ಕ ಆಯ್ಕೆ ಗೊಂಡಿರುವ ಸದಸ್ಯರಾಗಿದ್ದಾರೆ.
ಎರಡು ಗುಂಪುಗಳ ನಡುವೆ ನಡೆದ ಪ್ರಬಲ ಪೈಪೋಟಿಯಲ್ಲಿ ಒಂದೆ ಬಣದ ಎಲ್ಲಾ ನಿರ್ದೇಶಕರು ಆಯ್ಕೆ ಆಗುವ ಮೂಲಕ ಸಂಪೂರ್ಣ ಬಹುಮತ ಪಡೆದುಕೊಂಡಿದೆ. ಎದುರಾಳಿ ಬಣ ಒಬ್ಬ ನಿರ್ದೇಶಕರು ಆಯ್ಕೆಯಾಗಲು ಸಾಧ್ಯವಾಗದೆ, ಪರಾಜಿತಗೊಂಡಿದ್ದಾರೆ.