ಶಿರಸಿ: ಅನಕ್ಷರಸ್ಥಳಾಗಿ ಜಾನಪದ ಹಾಡಿನ ಮೂಲಕ ಸಮಾಜಕ್ಕೆ ಪರಿಚಿತಳಾಗಿ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟಕ್ಕೆ ಧ್ವನಿಯಾಗಿ ಅರಣ್ಯ ಭೂಮಿ ಹಕ್ಕಿನ ಹೋರಾಟಕ್ಕೆ ಸಂಗಾತಿಯಾಗಿ ಸಾಮಾಜಿಕ ಶ್ರೀಮತಿ ಸುಕ್ರಿ ಗೌಡ ಅವರ ಸಾಮಾಜಿಕ ಪ್ರಜ್ಞೆ ಪ್ರಶಂಸೆಯ ಕಾರ್ಯ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
1990 ರ ದಶಕದಲ್ಲಿ ಮದ್ಯಪಾನ ವಿರೋಧ ಹೋರಾಟಕ್ಕೆ ಶಕ್ತಿಯಾಗಿ ಸರಾಯಿ ವಿರುದ್ಧ ಹೋರಾಟದಲ್ಲಿ ಜಿಲ್ಲಾದ್ಯಂತ ಸಂಚರಿಸಿ ಹೋರಾಟಗಾರರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಳು. ಅವಳ ನಿಧನದಿಂದ ಸಮಾಜಕ್ಕೆ ತುಂಬಲಾರದಷ್ಟು ನಷ್ಟವಾಗಿದೆ ಎಂದು ಅವರು ಹೇಳಿದರು.
ಅರಣ್ಯ ಭೂಮಿ ಹಕ್ಕಿನ ಹೋರಾಟದಲ್ಲಿ ಹೋರಾಟಕ್ಕೆ ನಿಂತು ಮದ್ಯಪಾನ ವಿರೋಧಿ ಹೋರಾಟಕ್ಕೆ ಶಕ್ತಿ ನೀಡಿ ತನ್ನದೇ ಶೈಲಿಯ ರಚಿತವಲ್ಲದ ಪದ್ಯವನ್ನು ಏಕ ಕಂಠದಲ್ಲಿ ಹಾಡುವ ಶೈಲಿ ಮೆಚ್ಚುವಂತದ್ದು ಮೃತ ಶ್ರೀಮತಿ ಸುಕ್ರಿ ಗೌಡ ಅವರ ಜೀವನ ಶೈಲಿ ಇಂದಿನ ಯುವ ಪೀಳಿಗೆಗೆ ಆದರ್ಶಮಯ ಎಂದು ರವೀಂದ್ರ ನಾಯ್ಕ ಹೇಳಿದರು.