ಹೊನ್ನಾವರ : ಶರಾವತಿ ಸೇತುವೆಯ ಮೇಲೆ ನಿರಂತರ ಅಪಘಾತದಿಂದ ವಾಹನ ಸವಾರರ ಸಾವಿನ ಸಂಖ್ಯೆ ಏರಿಕೆ ಆಗುತ್ತಲೆ ಇತ್ತು. ಹಲವರ ಸಾವಿನ ನಂತರ ಎಚ್ಚೆತ್ತ ಎನ್ಎಚ್ಎಐ ಇದೀಗ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ.
ವಾಹನ ಸವಾರರ ಏಕಮುಖ ಸಂಚಾರದ ಅನುಕೂಲಕ್ಕೆ ರಸ್ತೆ ಮಧ್ಯದಲ್ಲಿ ರೋಡ್ ಸ್ಟಟ್ಸ್ ( ರಿಪ್ಲೇಟ್ಸ್ ) ಅಳವಡಿಸುವ ಕೆಲಸಕ್ಕೆ ಚಾಲನೆ ಕೊಟ್ಟಿದ್ದಾರೆ. ರಸ್ತೆ ಮದ್ಯದಲ್ಲಿ ಇಬ್ಭಾಗವಾಗಿ ರೋಡ್ ಸ್ಟಟ್ಸ್ ನಿರ್ಮಿಸಿರುವುದರಿಂದ ವಾಹನಗಳು ಏಕಮುಖ ಸಂಚಾರ ಮಾಡಲಿದೆ. ಏಕಮುಖ ಸಂಚಾರದಿಂದ ಅಪಘಾತ ತಪ್ಪಿಸುವ ಉದ್ದೇಶದಿಂದ ರೋಡ್ ಸ್ಟಟ್ಸ್ ನಿರ್ಮಿಸಿದ್ದಾರೆ.
ತಮ್ಮವರನ್ನು ಕಳೆದುಕೊಂಡ ಕುಟುಂಬದವರಿಗೆ ಮೊದಲೆ ಮಾಡಿದ್ದರೆ ನಮ್ಮವರು ಉಳಿಯುತ್ತಿದ್ದರು ಎನ್ನುವ ನೋವಿನ ಆಶಾಭಾವನೆ ಮೂಡುವುದು ಸಹಜವಾಗಿದೆ. ಮುಂದಾರರು ಅಪಘಾತ ಕಡಿಮೆ ಆಗಿ ಜೀವಹಾನಿ ಆಗದೆ ಇರಲಿ ಎನ್ನುವುದು ಜನರ ಆಗ್ರಹವಾಗಿದೆ.