ಮುಂಡಗೋಡ: ಮುಂಡಗೋಡ ತಾಲೂಕಾ ಆಸ್ಪತ್ರೆಯಲ್ಲಿ ಫೆ.7ರಂದು ವಿಶ್ವ ಸೇವಾ ಸಮಿತಿ ಪಿಡಿಜಿ ರೋ. ಸುಬ್ರಾವ್ ಕಾಸರಕೋಡ ಮೆಮೋರಿಯಲ್ ರೋಟರಿ ಚಾರಿಟೇಬಲ್ ಆಸ್ಪತ್ರೆ ಶಿರಸಿ, ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ ಕಾರವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ, ತಾಲೂಕ ಆಸ್ಪತ್ರೆ ಮುಂಡಗೋಡ, ಗ್ರೀನ್ ಕೇರ್ (ರಿ.) ಶಿರಸಿ, ಸಂಕಲ್ಪ ಟ್ರಸ್ಟ್ ಶಿರಸಿ ಮತ್ತು ಜ್ಞಾನಶ್ರೀ ಅಕಾಡೆಮಿ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಯ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಮುಂಡಗೋಡ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯವರಾದ ಡಾ. ಸ್ವರೂಪರಾಣಿ ಪಾಟೀಲ್, ರೋಟರಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಆದಿತ್ಯ ಫಡ್ನಿಸ್ ಮತ್ತು ಎಲ್ಲಾ ಗಣ್ಯರು ಸೇರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ ಆರ್. ಎಂ. ಮಾತನಾಡಿ ಕಣ್ಣಿನ ಆರೋಗ್ಯ ತುಂಬಾ ಮುಖ್ಯವಾದದ್ದು ಅದನ್ನು ಸ್ವಚ್ಛವಾಗಿ ಮತ್ತು ಚೆನ್ನಾಗಿ ಕಾಪಾಡಿಕೊಳ್ಳಿ ಎಂದು ತಿಳಿಸಿದರು. ಡಾ. ಸ್ವರೂಪ ರಾಣಿ ಪಾಟೀಲ್ ಅವರು ಮಾತನಾಡಿ ಮುಂಡಗೋಡ ತಾಲೂಕಿನಲ್ಲಿ ತುಂಬಾ ಫಲಾನುಭವಿಗಳು ಇದ್ದಾರೆ ಇಂಥ ಶಿಬಿರಗಳು ಈ ತಾಲೂಕಿನಲ್ಲಿ ಹೆಚ್ಚು ಹೆಚ್ಚು ನಡೆಸಬೇಕೆಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಂಡಗೋಡ ತಾಲೂಕು ಆಸ್ಪತ್ರೆಯ ನೇತ್ರಾಧಿಕಾರಿಗಳಾದ ಮಾರುತಿ ಸಿ. ಸಂಕಲ್ಪ ಟ್ರಸ್ಟ್ ಶಿರಸಿಯ ಅಧ್ಯಕ್ಷರಾದ ಕುಮಾರ್ ಪಟಗಾರ, ರೋಟರಿ ಆಸ್ಪತ್ರೆಯ ಕಾರ್ಯಕ್ರಮ ಅಧಿಕಾರಿಗಳಾದ ಗಿರೀಶ್ ದಾರೇಶ್ವರ್ ಮತ್ತು ಜ್ಞಾನಶ್ರೀ ಅಕಾಡೆಮಿಯ ಯೋಗೇಂದ್ರ ರೇವಣಕರ್ ಸಿದ್ದಾಪುರ ತಾಲೂಕಿನ ಕ್ಯಾದಗಿ ಪ್ರಾಥಮಿಕ ಉಪಸ್ಥಿತರಿದ್ದರು. ರೋಟರಿ ಆಸ್ಪತ್ರೆಯ ಕಾರ್ಯಕ್ರಮ ಅಧಿಕಾರಿ ಗಿರೀಶ್ ಧಾರೇಶ್ವರ ಕಣ್ಣಿನ ಶಸ್ತ್ರ ಚಿಕಿತ್ಸೆಯ ಶಿಬಿರದ ಬಗ್ಗೆ ಮಾಹಿತಿಯನ್ನು ನೀಡಿದರು ಕಾರ್ಯಕ್ರಮದಲ್ಲಿ ಜೆ.ಕೆ. ಎಂಟರ್ಪ್ರೈಸಸ್ ವ್ಯವಸ್ಥಾಪಕರಾದ ಮಹಾಂತೇಶ್ ಪ್ರಭು, ಗ್ರೀನ್ ಕೇರ್ ಸಂಸ್ಥೆಯ ಕಚೇರಿ ನಿರ್ವಾಹಕರು ಶ್ರೀಮತಿ ಅಪ್ಸಾನಾ, ರೋಟರಿ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ರೋಟರಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಆದಿತ್ಯ ಫಡ್ನಿಸ್ ಅವರು ಶಸ್ತ್ರ ಚಿಕಿತ್ಸೆಯನ್ನು ಮಾಡಲಿದ್ದಾರೆ. ಶಿಬಿರದಲ್ಲಿ 117 ಶಿಬಿರಾರ್ಥಿಗಳನ್ನು ತಪಾಸಣೆ ನಡೆಸಿ 71 ಶಿಬಿರಾರ್ಥಿ ಗಳನ್ನು ಆಯ್ಕೆ ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಲು ರೋಟರಿ ಆಸ್ಪತ್ರೆಗೆ ಆಸ್ಪತ್ರೆಯ ಬಸ್ಸಿನಲ್ಲಿ ಕರೆದುಕೊಂಡು ಹೋಗಲಾಯಿತು.