ಕಾರವಾರ: ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಕಾರವಾರ ಪತ್ರಿಕಾ ಸಂಭಾಗಣದಲ್ಲಿ ಫೆ.೧೦ ಸೋಮವಾರ ಮುಂಜಾನೆ ೯-೩೦ ಕ್ಕೆ ತಾಲೂಕಿನ ಅರಣ್ಯವಾಸಿಗಳ ಚಿಂತನಾ ಸಭೆಯನ್ನು ಸಂಘಟಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿಗೆ ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿಗೆ ಸಂಬಂಧಿಸಿ ಸರ್ಕಾರ ತೆಗೆದುಕೊಂಡಿರುವ ನಿರ್ಣಯ, ಅರಣ್ಯವಾಸಿಗಳ ಸಮಸ್ಯೆ ಮತ್ತು ಕಾನೂನು ತೊಡಕುಗಳ ಬಗ್ಗೆ ಚಿಂತನಾ ಸಭೆಯಲ್ಲಿ ಚರ್ಚಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಚಿಂತನಾ ಸಭೆಯಲ್ಲಿ ಗುರುತಿನ ಪತ್ರ ಮತ್ತು ಗ್ರೀನ್ ಕಾರ್ಡ ಧರಿಸಿಕೊಂಡು ಅರಣ್ಯವಾಸಿಗಳು ಸಕಾರದಲ್ಲಿ ಹಾಜರಿರಲು ಅವರು ಕೋರಿದ್ದಾರೆ.