ಭಟ್ಕಳ: ತಾಲೂಕಿನ ನಾಮಧಾರಿ ಸಮಾಜದ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದಿಂದ ಶ್ರೀದೇವರ ಪಾಲಕಿ ಉತ್ಸವ ನಗರದಾದ್ಯಂತ ಸಂಚರಿಸಿ ಸಾವಿರಾರು ಭಕ್ತ ಸಮೂಹ ಭಕ್ತಿ ಪರವಶತೆಯಲ್ಲಿ ತೇಲುವಂತೆ ಮಾಡಿತು. ಈ ಪಾಲಕಿ ಮಹೋತ್ಸವಕ್ಕೆ ನಾಮಧಾರಿ ಸಮಾಜದ ಅಧಿಕ ಬಂಧುಗಳು ಪಾಲಕಿಯಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಪೂರ್ವದಲ್ಲಿ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಶ್ರೀ ದೇವರಿಗೆ ತುಲಾಭಾರ ಸಮರ್ಪಣೆ ಮಾಡಲಾಯಿತು. ನಂತರ ಸಂಜೆ 4.30ಕ್ಕೆ ವೆಂಕಟೇಶ್ವರ ದೇವರ ಪಾಲಕಿಯೂ ಸಹಸ್ರಕ್ಕೂ ಅಧಿಕ ಭಕ್ತರ ಜಯಘೋಷದಲ್ಲಿ ನಗರದಾದ್ಯಂತ ಸಂಚರಿಸಿದ್ದು ಮಧ್ಯರಾತ್ರಿ 2 ಗಂಟೆಯ ವೇಳೆಗೆ ಪಾಲಕಿ ಉತ್ಸವ ದೇವಸ್ಥಾನಕ್ಕೆ ತೆರಳಿ ಬಳಿಕ ಪೂಜೆ ಸಲ್ಲಿಸುವ ಮೂಲಕ ಪಾಲಕಿ ಉತ್ಸವ ಮುಕ್ತಾಯಗೊಂಡಿತು.
ದೇವಸ್ಥಾನದಿಂದ ಆರಂಭಗೊಳ್ಳುವ ಪಾಲಕಿ ಉತ್ಸವವೂ ಸೋನಾರಕೇರಿ, ನಗರ ಪೊಲೀಸ್ ಠಾಣಾ ಮಾರ್ಗವಾಗಿ ಹಳೆ ಬಸ್ ನಿಲ್ದಾಣದಿಂದ ತೆರಳಿ ಮಾರಿಗುಡಿ ದೇವಸ್ಥಾನದಿಂದ ಕಾಸ್ಮುಡಿ ದೇವಸ್ಥಾನ ಸಮೀಪದ ಕಟ್ಟೆಯ ತನಕ ತೆರಳಿ ಅಲ್ಲಿ ಭಕ್ತರಿಂದ ವಿಶೇಷ ಪೂಜೆಯನ್ನು ಸಲ್ಲಿಸಿ ಅದೇ ಮಾರ್ಗವಾಗಿ ಚೌತನಿ ಕುದುರೆ ಬೀರಪ್ಪ ದೇವಸ್ಥಾನದಲ್ಲಿಯೂ ಪೂಜೆಯನ್ನು ಸಲ್ಲಿಸಲಿರುವ ಭಕ್ತರು ಪಾಲಕಿಯನ್ನು ರಘುನಾಥ ರಸ್ತೆಯ ಮೂಲಕ ಮಣ್ಕುಳಿಗೆ ಬರಲಿದೆ. ಮಣ್ಕುಳಿಯಲ್ಲಿನ ಭಕ್ತರು ಪೂಜೆದ ಬಳಿಕ ಪಾಲಕಿಯೂ ಅಲ್ಲಿಂದ ವಾಪಸ್ಸು ಬಂದು ಪದ್ಮಾವತಿ ದೇವಸ್ಥಾನಕ್ಕೆ ಬರಲಿದೆ. ಇಲ್ಲಿಯೂ ಪೂಜೆ ಪುನಸ್ಕಾರವನ್ನು ಸಲ್ಲಿಸಿ ಕಳಿ ಹನುಮಂತ ದೇವಸ್ಥಾನ ಮಾರ್ಗವಾಗಿ ರಾತ್ರಿ 2 ಗಂಟೆ ಸುಮಾರಿಗೆ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ತೆರಳಿತು.
ಪಾಲಕಿ ಉತ್ಸವದ ಬಳಿಕ ರಾತ್ರಿ ಮಹಾ ಮಂಗಳಾರತಿ, ಹಾಗೂ ತೀರ್ಥ ಪ್ರಸಾದ ನೀಡಿ ಪಾಲಕಿ ಮಹೋತ್ಸವ ಮುಕ್ತಾಯಗೊಂಡಿತು. ಪಾಲಕಿ ಉದ್ದಕ್ಕೂ ಮಹಿಳೆಯ ಭಜನಾ ಕುಣಿತ, ಚಂಡೆ ಹಾಗೂ ಗೊಂಬೆ ಕುಣಿತ ಎಲ್ಲರ ಆಕರ್ಷಣೆಗೊಳಿಸಿತು.
ಈ ಪಾಲಕಿಯಲ್ಲಿ ದೇವಸ್ಥಾನ ಆಡಳಿತ ಮಂಡಳಿಯವರು ಹಾಗೂ ಮಾಜಿ ಶಾಸಕ ಸುನೀಲ ನಾಯ್ಕ ಸೇರಿದಂತೆ ಮಹಿಳೆ ಹಾಗೂ ಪುರುಷರು ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.