Slide
Slide
Slide
previous arrow
next arrow

ಗ್ರಾಮಾಡಳಿತ ಅಧಿಕಾರಿಗಳ ಮೇಲೆ ದೌರ್ಜನ್ಯ:ಚಿಕ್ಕಮಗಳೂರು ಡಿಸಿ, ಎಡಿಸಿ ವಿರುದ್ಧ ಮುಖ್ಯಮಂತ್ರಿಗೆ ಮನವಿ

300x250 AD

ಭಟ್ಕಳ: ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀಮತಿ ಮೀನಾ ನಾಗರಾಜ್ ಮತ್ತು ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಇವರನ್ನು ಕೂಡಲೇ ವರ್ಗಾವಣೆ ಮಾಡಿ ನ್ಯಾಯ ಒದಗಿಸಿಕೊಡುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ರವರಿಗೆ ಉತ್ತರ ಕನ್ನಡ ಜಿಲ್ಲಾ ಹಾಗೂ ಭಟ್ಕಳ ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಕಪ್ಪುಪಟ್ಟಿ ಧರಿಸಿ ತಶೀಲ್ದಾರರ ನಾಗೇಂದ್ರ ಕೋಳಶೆಟ್ಟಿ ಮೂಲಕ ಮನವಿ ಸಲ್ಲಿಸಿದರು.

ವಾಸ್ತವವಾಗಿ ಮಾನ್ಯ ಜಿಲ್ಲಾಧಿಕಾರಿಗಳು ನಡೆಸಿದ KSWAN ಸಭೆಯಲ್ಲಿ,ಸಭೆಯಲ್ಲಿ ಹಾಜರಾಗಿದ್ದವರನ್ನು ಅನುಮತಿ ಮೇರೆಗೆ ರಜೆ ಹಾಕಿದವರನ್ನು, ಗರ್ಭಿಣಿ ಮಹಿಳೆ ಆಸ್ಪತ್ರೆಗೆ ಅನುಮತಿ ಪಡೆದುಕೊಂಡು ಹೋದರೂ ಕೂಡ, ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿ ಜೇಕಡಾ 90% ಮೇಲ್ಪಟ್ಟು ಪ್ರಗತಿ ಸಾಧಿಸಿದವರನ್ನೂ, ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಸುಧೀರ್ಘ ರಾತ್ರಿ 7-00 ರವರೆಗೆ KSWAN ಸಭೆಯಲ್ಲಿ ಕುಳಿತ,ಪರಿಣಾಮವಾಗಿ ಅನಿವಾರ್ಯವಾಗಿ ಶೌಚಾಲಯಕ್ಕೆ ತೆರಳಿದವರನ್ನೂ,
ನ್ಯಾಯಾಲಯ ಪ್ರಕರಣಕ್ಕೆ ಅನುಮತಿ ಪಡೆದು ಹೋದವರನ್ನೂ, ದಂಡನೆಯ ಆದೇಶದಲ್ಲಿ ಉಲ್ಲೇಖಿಸಿರುವ ಯಾವುದೇ ತಿಳುವಳಿಕೆಯನ್ನೂ ಕೂಡ ನೀಡದೇ,ಕೆ.ಸಿ.ಎಸ್.ಆರ್ ನಿಯಮಗಳನ್ನು ಉಲ್ಲಂಘಿಸಿ ಮನಬಂದಂತೆ ತಮ್ಮ ಹುದ್ದೆಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಧೀನ ನೌಕರರನ್ನು ತಮ್ಮ ಅದೇಶದ ಮೂಲಕ ಶಿಕ್ಷಿಸಿ ದರ್ಪ ಮೆರೆದು ಕರ್ತವ್ಯಲೋಪ ಎಸಗಿರುತ್ತಾರೆ.
ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ವಾತಂತ್ರ್ಯಪೂರ್ವದ ಬ್ರಿಟೀಷ್ ಆಳ್ವಿಕೆ ಮಾದರಿಯನ್ನು ಜೀವಂತವಾಗಿರಿಸಿ ದುರಾಡಳಿತ ನಡೆಸುತ್ತಿರುವ ಜಿಲ್ಲಾಧಿಕಾರಿ ಶ್ರೀಮತಿ ಮೀನಾ ನಾಗರಾಜ್ ಮತ್ತು ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ರವರನ್ನು ಕೂಡಲೇ ಚಿಕ್ಕಮಗಳೂರು ಜಿಲ್ಲೆಯಿಂದ ವರ್ಗಾಯಿಸಿ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಗೆ ಜಿಲ್ಲಾಧಿಕಾರಿ/ಅಪರ ಜಿಲ್ಲಾಧಿಕಾರಿಯಾಗಿ ಸ್ಥಳನಿಯುಕ್ತಿಗೊಳಿಸು ಸದರಿಯವರು ಮಾಡಿರುವ ಕಾನೂನು ಬಾಹಿರ ಮತ್ತು ಅಧೀನ ನೌಕರ ವಿರೋಧಿ ಆದೇಶಗಳನ್ನು ವಿಚಾರಣೆ ನಡೆಸಿ ಕಾನೂನು ರೀತ್ಯಾ ಕ್ರಮಗಳನ್ನು ಕೈಗೊಂಡು ಈ ವೃಂದದ 9000 ನೌಕರರಿಗೆ ನ್ಯಾಯ ಒದಗಿಸುವಂತೆ ಮನವಿಯಲ್ಲಿ ಕೋರಿದ್ದಾರೆ .ಆದೇಶಗಳ ವಿರುದ್ದವಾಗಿ ತೆಗೆದುಕೊಂಡಿರುವ ಕ್ರಮಗಳನ್ನು ರದ್ದುಪಡಿಸುವವರೆಗೆ ಹಾಗೂ ಇಬ್ಬರನ್ನು ವರ್ಗಾವಣೆ ಮಾಡದಿದ್ದಲ್ಲಿ ಫೆ.03 ರಿಂದ ರಾಜ್ಯಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬಗೆಯ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ. ತಾಲ್ಲೂಕು ಕಛೇರಿ/ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅನಿರ್ಧಿಷ್ಟಾವಧಿ ಮುಷ್ಕರವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ವಕೀಲನಿಂದ ಮಹಿಳಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದನೆ; ಜಿಲ್ಲಾಧಿಕಾರಿಯವರಿಗೆ ಮನವಿ

300x250 AD

ಇದೇ ಸಂದರ್ಭದಲ್ಲಿ ಕುಮಟಾ ತಾಲೂಕಾಡಳಿತ ಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಗೆ ವಕೀಲ ಗಿರೀಶ ನಾಯ್ಕ ಎಂಬುವರು ನಾಯಿ ಎಂದು ಆಕ್ಷೇಪಾರ್ಹ ಬೈದು, ನಿಂದಿಸಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಚಾಂದ ಬಾಷಾ,ತಾಲ್ಲೂಕ ಸಂಘದ ಅಧ್ಯಕ್ಷೆ ಲತಾ ನಾಯ್ಕ, ಗೌರವಾಧ್ಯಕ್ಷ ಕೆ ಶಂಭು,ಜಿಲ್ಲಾ ಖಂಜಾಚಿ ಚರಣ ಗೌಡ,
ಸಂಘಟನೆ ಕಾರ್ಯದರ್ಶಿ ಗಣೇಶ ಕುಲಾಲ್, ಸದಸ್ಯರಾಧ  ವಿನುತ,ಶ್ರುತಿ ದೇವಾಡಿಗ,ಬೀಮಣ್ಣ ಶಬಾನ ಬಾನು,ದೀಕ್ಷಿತ, ದೀಪ್ತಿ,ವೀಣಾ, ಐಶ್ವರ್ಯ
ಸೇರಿದಂತೆ ಮುಂತಾದವರು ಉಪಸ್ಥಿತಿ ಇದ್ದರು.

Share This
300x250 AD
300x250 AD
300x250 AD
Back to top