Slide
Slide
Slide
previous arrow
next arrow

ಭಟ್ಕಳ ನ್ಯಾಯಾಲಯದಲ್ಲಿ ರಾಷ್ಟ್ರೀಯ ಸ್ವಚ್ಚತಾ ದಿನಾಚರಣೆ

300x250 AD

ಭಟ್ಕಳ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಹಾಗೂ ಪುರಸಭೆ ಭಟ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸ್ವಚ್ಚತಾ ದಿನಾಚರಣೆಯನ್ನು ಆಚರಿಸಲಾಯಿತು.
ನ್ಯಾಯಾಲಯದ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಶ್ರೇಣಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಕಾಂತ ಕುರಣಿ ಅವರು ಸ್ವಚ್ಚತೆಯ ಮಹತ್ವವನ್ನು ತಿಳಿಸಿದರು. ಪ್ರತಿಯೋರ್ವರೂ ಕೂಡಾ ಪ್ರಥಮ ಆದ್ಯತೆಯನ್ನು ತಮ್ಮ ತಮ್ಮ ಪರಿಸರ ಸ್ವಚ್ಚತೆಗೆ ನೀಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆಯ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶೆ ಧನವತಿ, ಸಹಾಯಕ ಸರಕಾರಿ ಅಭಿಯೋಜಕರುಗಳಾದ ವಿವೇಕ ನಾಯ್ಕ, ಶೇಖರ ಹರಿಕಾಂತ, ವಕೀಲರ ಕಾರ್ಯದರ್ಶಿ ನಾಗರಾಜ ನಾಯ್ಕ, ವಕೀಲರುಗಳಾದ ವಿ.ಎಫ್.ಗೋಮ್ಸ, ಎಸ್.ಜೆ. ನಾಯ್ಕ, ನಾರಾಯಣ ಯಾಜಿ, ಮಹೇಶ ಆರ್. ನಾಯ್ಕ, ಆರ್.ಜಿ.ನಾಯ್ಕ, ವಿ.ಆರ್. ಸರಾಫ್, ಗಣೇಶ ದೇವಾಡಿಗ, ರವೀಂದ್ರ, ದಾಮೋದರ ನಾಯ್ಕ, ಗಣೇಶ ಮುರ್ಡೇಶ್ವರ, ನ್ಯಾಯಾಲಯದ ಸಿಬ್ಬಂದಿಗಳು, ಪುರಸಭೆಯ ಕಾರ್ಮಿಕರು ಮುಂತಾದವರಿದ್ದರು.

300x250 AD
Share This
300x250 AD
300x250 AD
300x250 AD
Back to top