Slide
Slide
Slide
previous arrow
next arrow

ದೈವಜ್ಞ ಸಮಾಜದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿ

300x250 AD

ಹೊನ್ನಾವರ : ದೈವಜ್ಞ ಸಮಾಜದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ನಡೆದಿದೆ. ತಮ್ಮ ವೃತ್ತಿಯ ಒತ್ತಡದ ನಡುವೆ ಸಮಾಜ ಬಾಂದವರು ಒಗ್ಗೂಡಲು ಇಂತ ಕಾರ್ಯಕ್ರಮ ವೇದಿಕೆ ಆಗುತ್ತಿದೆ ಎಂದು ದೈವಜ್ಞ ಸಮಾಜದ ದಾವಣಗೆರೆಯ ಅಧ್ಯಕ್ಷ ಪ್ರಶಾಂತ ವೇರ್ಣೇಕರ ಹೇಳಿದರು. 

ಅವರು ಪಟ್ಟಣದ ನ್ಯೂಸ್ ಇಂಗ್ಲಿಷ್ ಸ್ಕೂಲ್ ಕ್ರೀಡಾಂಗಣದಲ್ಲಿ ದೈವಜ್ಞ ಕ್ರಿಕೆಟ್ ಕ್ಲಬ್ ವತಿಯಿಂದ ನಡೆದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ತಮ್ಮ ಮೂಲ ಮನೆಯು ಹೊನ್ನಾವರ ಆಗಿರುವುದರಿಂದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆದಿರುವುದು ಸಂತೋಷ ತಂದಿದೆ. ಕ್ರೀಡೆಯಿಂದ ಸಮಾಜವನ್ನು ಒಗ್ಗಟ್ಟಾಗಿ ಇಡಬಹುದು ಎಂದರು.

ದೈವಜ್ಞ ವಾಹಿನಿಯ ಅಧ್ಯಕ್ಷ ಕೃಷ್ಣ ಶೇಟ್ ಮಾತನಾಡಿ, ಸಚಿನ ಶೇಟ್ ರವರು ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಾರೆ. ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಮಾಡಬೇಕು ಎನ್ನುವುದು ಅವರ ಕನಸಾಗಿತ್ತು. ಅದನ್ನು ಅವರು ಈ ಮೂಲಕ ಸಾಕಾರ ಮಾಡಿದ್ದಾರೆ. ಯಾವುದೇ ಕಾರ್ಯಕ್ರಮ ನಡೆಯಲು ಎಲ್ಲರೂ ಸಂಘಟಿತರಾಗಿ ಸಹಕಾರ ನೀಡುವುದು ಮುಖ್ಯ ಎಂದರು.

300x250 AD

  ಈ ಸಂದರ್ಭದಲ್ಲಿ ಸಂಘಟನೆಯ ನೇತೃತ್ವ ವಹಿಸಿದ ಸಚಿನ ಶೇಟರವರನ್ನು ಸನ್ಮಾನಿಸಲಾಯಿತು. ದೈವಜ್ಞ ವಾಹಿನಿ ಹೊನ್ನಾವರ ಫೈನಲ್ ಪಂದ್ಯಾವಳಿಯನ್ನು ಗೆದ್ದಿದ್ದು, ರನ್ನರ್ ಅಪ್ ಆಗಿ ಕಾರವಾರದ ಫ್ರೆಂಡ್ಸ್ ಇಲೆವೆನ್ ಪ್ರಶಸ್ತಿಯನ್ನು ಬಾಚಿಕೊಂಡಿತು.3 ದಿನಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ 12 ತಂಡಗಳು ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ದೈವಜ್ಞ ಯುವಕ ಸಂಘದ ಮುಖಂಡರು, ದೈವಜ್ಞ ಮಾತೃವಾಹಿನಿಯ ಸಮಾಜದವರು ಹಾಜರಿದ್ದರು. ಸಚಿನ್ ಶೇಟ ಕಾರ್ಯಕ್ರಮ ನಿರ್ವಹಿಸಿದರು‌.

Share This
300x250 AD
300x250 AD
300x250 AD
Back to top