Slide
Slide
Slide
previous arrow
next arrow

ಫೆ.2ಕ್ಕೆ ಭಟ್ಕಳ ಅರ್ಬನ್ ಕೋ.ಆಪ್. ಬ್ಯಾಂಕ್ ಆಡಳಿತ‌ ಮಂಡಳಿಗೆ ಚುನಾವಣೆ

300x250 AD

ಭಟ್ಕಳ: ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ ಚುನಾವಣೆ ಫೆ.2ರಂದು ನಡೆಯಲಿದ್ದು ಈಗಾಗಲೇ ಅಭ್ಯರ್ಥಿಗಳ ನಾಮ ಪತ್ರ ಪರಿಶೀಲನೆ ನಡೆದು ಅಭ್ಯರ್ಥಿಗಳು ನಾಮ ಪತ್ರ ವಾಪಾಸು ಪಡೆಯುವ ಸಂದರ್ಭದಲ್ಲಿ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಒಟ್ಟೂ ೧೫ ಕ್ಷೇತ್ರಗಳಲ್ಲಿ ೯ ಸಾಮಾನ್ಯ ಕ್ಷೇತ್ರ, ಪರಿಶಿಷ್ಟ ಜಾತಿ ಕ್ಷೇತ್ರ ೧,  ಪರಿಶಿಷ್ಟ ಪಂಗಡ ಕ್ಷೇತ್ರ ೧, ಮಹಿಳಾ ಮೀಸಲು ಕ್ಷೇತ್ರ ೨, ಹಿಂದುಳಿದ ವರ್ಗ “ಅ” ಮೀಸಲು ೧, ಹಿಂದುಳಿದ ವರ್ಗ “ಬ” ಮೀಸಲು ೧ ಕ್ಷೇತ್ರಗಳಿದ್ದು ಅವುಗಳಲ್ಲಿ  ಮಹಿಳಾ ಮೀಸಲು ಕ್ಷೇತ್ರಕ್ಕೆ ಅವಿರೋಧವಾಗಿ ಪ್ರಥಮವಾಗಿ ಸ್ಪರ್ಧಿಸಿದ್ದ ಬೀನಾ ಮಂಕಾಳ ವೈದ್ಯ, ಹಿಂದುಳಿದ ವರ್ಗ ಅ ಕ್ಷೇತ್ರಕ್ಕೆ ಪ್ರಥಮ ಬಾರಿ ಸ್ಪರ್ಧಿಸಿದ್ದ ಸುರೇಶ ಭಾಸ್ಕರ ಪೂಜಾರಿ, ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಮೊಹಮ್ಮದ್ ಅಯೂಬ್ ಹಮ್ಜಾ ಹಾಗೂ ಮಹಿಳಾ ಮೀಸಲು ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಮೆಹಬೂಬಿ ಬಾಬಾಲಾಲ್ ಸಾಹಿಬ್ ಪಟೇಲ್ ಆಯ್ಕೆಯಾಗಿದ್ದಾರೆ. 

300x250 AD

ಉತ್ತರ ಕನ್ನಡ ಜಿಲ್ಲಾ ಸಾಮಾನ್ಯ ಮತಕ್ಷೇತ್ರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಒಟ್ಟೂ ೧೬ ಅಭ್ಯರ್ಥಿಗಳು ಕಣದಲ್ಲಿದ್ದು ಅಬ್ದುಲ ಖಾಲಿಕ್ ಅಬ್ದುಲ ಹಾದಿ ಸೌದಾಗರ, ಅಹ್ಮದ್ ನಬೀ ಮೆಹಬೂಬ ಸಾಬ ಮುಲ್ಲಾ, ಈರಾ ದುರ್ಗಪ್ಪ ನಾಯ್ಕ, ಜಾಫರ ಸಾದಿಕ್ ಇಸ್ಮಾಯಿಲ್ ಶಾಬಂದ್ರಿ, ತೌಸೀಫ್ ಅಬ್ದುಲ್ ವಹಾಬ್ ಶೇಖ, ನದೀಮ ಅಹ್ಮದ್ ಮುಲ್ಲಾ, ನಸೀಮುಲ್ ಘನಿ ಇಸ್ಮಾಯಿಲ್ ಶಾಬ೦ದ್ರಿ, ಪದ್ಮನಾಭ ರಾಮಕೃಷ್ಣ ಪೈ, ಮಹ್ಮದ್ ಜುಬೇರ ಮೊಹಿದ್ದೀನ್ ಕೋಲಾ, ರಮೇಶ ಸುಕ್ರಾ ನಾಯ್ಕ, ರಾಮ ಬಿನ ತಿಮ್ಮಣ್ಣ ನಾಯ್ಕ, ವಸಂತ ತಿಮ್ಮಯ್ಯ ದೇವಾಡಿಗ, ವಿಕ್ಟರ್ ಫ್ರಾನ್ಸಿಸ್ ಗೋಮ್ಸ್, ಶ್ರೀಕಾಂತ ನಾರಾಯಣ ನಾಯ್ಕ, ಶ್ರೀಧರ ಭೈರಪ್ಪ ನಾಯ್ಕ, ಸೈಯದ್ ಜೈನುಲ್ಲಾಬಿದಿನ್ ಫಾರೂಕಿ ಅಬ್ದುಲ್ ಖಾದಿರ್ ಸ್ಪರ್ಧೆಯಲ್ಲಿದ್ದಾರೆ. ಉಡುಪಿ ಜಿಲ್ಲಾ ಸಾಮಾನ್ಯ  ಮತಕ್ಷೇತ್ರದಲ್ಲಿ ಅಬ್ದುಲ್ ವಹಾಬ್ ಇಬ್ರಾಹಿಂ, ತುಳಸಿದಾಸ ಮಾಸ್ತಿ ಮೊಗೇರ ಕಣದಲ್ಲಿದ್ದಾರೆ. ಮೀಸಲಾತಿಯಡಿಯಲ್ಲಿ ಹಿಂದುಳಿದ ವರ್ಗ ಬ ಕ್ಷೇತ್ರಕ್ಕೆ ಫಿಲೀಫ್ ಆರ್. ಅಲ್ಮೇಡಾ, ಮನ್ಯುಯಲ್ ಎಂ. ಲೀಮಾ, ಸೈಮನ್ ಲೀನ್ ಡಿಸೋಜಾ ಕಣದಲ್ಲಿದ್ದಾರೆ. ಪರಿಶಿಷ್ಟ ಜಾತಿ  ಕ್ಷೇತ್ರದಲ್ಲಿ ಮೋಹನ್ ಭದ್ರ ಶಿರಾಲಿಕರ್, ಗಣಪತಿ ಗೋಯ್ದ ಮೊಗೇರ, ಮಾಸ್ತಿ ದುರ್ಗಪ್ಪ ಮೊಗೇರ, ಮಾಸ್ತಿ ಸಂಕಯ್ಯ ಮೊಗೇರ ಕಣದಲ್ಲಿದ್ದಾರೆ. ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಕ್ಕೆ  ರಾಘವೇಂದ್ರ ದುರ್ಗಯ್ಯ ಗೊಂಡ, ಸಂತೋಷ್ ನಾಗಯ್ಯ ಗೊಂಡ ಕಣದಲ್ಲಿದ್ದಾರೆ. ಚುನಾವಣಾಧಿಕಾರಿ ಜಿ. ಕೆ. ಭಟ್, ಕ್ರಮಬದ್ಧ ಅಭ್ಯರ್ಥಿಗಳ ಯಾದಿಯನ್ನು ಪ್ರಕಟಿಸಿದ್ದಾರೆ

Share This
300x250 AD
300x250 AD
300x250 AD
Back to top