ಶಿರಸಿ: ಮೆಕ್ಕೆಜೋಳದ ರೋಗಶಾಸ್ತ್ರಜ್ಞರಾದ ಡಾ. ಸುರೇಶ್ ಎಲ್.ಎಮ್.ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯಾದ ಫೆಲೋ ಆಫ್ ಇಂಡಿಯನ್ ಫೈಟೊಪಾಥೋಲಾಜಿಕಲ್ ಸೊಸೈಟಿ (ಎಫ್ಪಿಎಸ್ಐ) ನೀಡಿ ಗೌರವಿಸಲಾಗಿದೆ.
ಜನವರಿ 19 ರಿಂದ 21ರವರೆಗೆ ಮಹಾರಾಷ್ಟ್ರದ ನಾಗ್ಪುರದ ಐಸಿಎಆರ್ – ಸೆಂಟ್ರಲ್ ಸಿಟ್ರಸ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ನಡೆದ “ಉದಯೋನ್ಮುಖ ಸಮಸ್ಯೆಗಳು ಮತ್ತು ಸಸ್ಯ ಆರೋಗ್ಯ ನಿರ್ವಹಣೆಯಲ್ಲಿ ಸುಸ್ಥಿರ ತಂತ್ರಗಳು: ಜಾಗತಿಕ ದೃಷ್ಟಿಕೋನ” ಎಂಬ 77 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಈ ಗೌರವಾನ್ವಿತ ಫೆಲೋಶಿಪ್ ಡಾ. ಸುರೇಶ್ ಅವರ ಸಸ್ಯ ರೋಗಶಾಸ್ತ್ರ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಮತ್ತು ಸಸ್ಯ ಆರೋಗ್ಯ ನಿರ್ವಹಣೆಯನ್ನು ಮುನ್ನಡೆಸುವಲ್ಲಿ ಅವರ ಅಚಲ ಸಮರ್ಪಣೆಯನ್ನು ಗುರುತಿಸುತ್ತದೆ.