ಶಿರಸಿ: ಅಸ್ತಿತ್ವವಿಲ್ಲದ ಸಮಿತಿಯಿಂದ ೧೯೩೦ ರ ದಾಖಲೆಯನ್ನು ಸಲ್ಲಿಸಲು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ವಿವಿಧ ಅರಣ್ಯ ಹಕ್ಕು ಸಮಿತಿಯು ಸೂಚನಾ ಪತ್ರ ನೀಡಿ ವಿಚಾರಣೆ ಪ್ರಕ್ರಿಯೆ ಜರುಗುತ್ತಿರುವದಕ್ಕೆ ಸಾರ್ವತ್ರಿಕವಾಗಿ ಅರಣ್ಯವಾಸಿಗಳು ಆಕ್ಷೇಪಣಾ ಪತ್ರ ಜ.೨೩ ಗುರುವಾರದಂದು ಜರುಗಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಲಯದಲ್ಲಿ ಜರುಗಿದ ತಾಲೂಕಾ ಮಟ್ಟದ ಅರಣ್ಯ ಅತಿಕ್ರಮಣದಾರ ಗ್ರೀನ್ ಕಾರ್ಡ ಪ್ರಮುಖರ ತರಬೇತಿ ಶಿಬಿರದಲ್ಲಿ ನಿರ್ಧರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿರಸಿ ಉಪವಿಭಾಗ ಅರಣ್ಯ ಹಕ್ಕು ಸಮಿತಿ ಮತ್ತು ಗ್ರಾಮ ಅರಣ್ಯ ಹಕ್ಕು ಸಮಿತಿಗಳು ಮೂರು ತಲೆಮಾರಿನ ಪೂರ್ವದಿಂದ ಅಂದರೆ ೧೯೩೦ ರ ಇಸ್ವಿಯ ಅರಣ್ಯದಲ್ಲಿ ವಾಸಿಸಿರುವ ಮತ್ತು ಅವಲಂಬಿತವಾಗಿರುವ ಧೃಡಿಕೃತ ದಾಖಲೆಗಳನ್ನ ಮತ್ತು ವಾಸ ಮಾಡುತ್ತಿರುವ ಅರಣ್ಯ ಜಮೀನಿನ ಕಬ್ಜ ಹೊಂದಿರುವ ಬಗ್ಗೆ ದಾಖಲೆಗಳಿಗೆ ಹಾಜರ್ ಮಾಡಲು ಕಾನೂನು ವ್ಯತಿರಿಕ್ತವಾಗಿ ನೋಟೀಸ್ ನೀಡುತ್ತಿರುವುದಕ್ಕೆ ಆಕ್ಷೇಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ಉಸ್ತುವಾರಿ ಕಾರ್ಲಲುಯಿಸ್ ಫರ್ನಾಂಡಿಸ್, ಕಿರಣ ಮರಾಠಿ ದೇವನಳ್ಳಿ, ನೆಹರು ನಾಯ್ಕ ಬಿಳೂರು, ರಮೇಶ ಮರಾಠಿ ಚಂದ್ರಶೇಖರ ಶಾನಭಾಗ ಬಂಡಲ, ಎಮ್.ಆರ್. ನಾಯ್ಕ, ಕಂಡ್ರಾಜಿ, ಬಾಬು ಮರಾಠಿ, ಪರಮೇಶ್ವರ ವಾನಳ್ಳಿ, ಮಲ್ಲೇಶಿ ಸಂತೊಳ್ಳಿ, ಶಂಕರ ಗೌಡ ಜಾನ್ಮನೆ, ಚಂದ್ರು ನಾಯ್ಕ ಕಂಡ್ರಾಜಿ, ಕುಸುಮಾ ಬೇಡರ, ಕಲ್ಪನಾ ಫಾವಸ್ಕರ್, ಯಶೋಧಾ ನೌಟುರು, ಟಿಪ್ಪು ನಾಯ್ಕ ಗೋಣುರು, ಶಿವು ಗೌಡ ಕೊಟ್ಟೆಕೊಪ್ಪ, ಬೇಳ್ಳಾ ಗೌಡ ಬಂಕನಾಳ, ಶಂಭು ಮಡಿವಾಳ ಮಳಲಗಾಂವ್ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಸಹಸ್ರಾರು ಆಕ್ಷೇಪಣೆ:
ಸಹಸ್ರಾರು ಸಂಖ್ಯೆಯಲ್ಲಿ ಆಕ್ಷೇಪಣಾ ಪತ್ರ ಜನವರಿ ೨೩ ರಂದು ಉಪವಿಭಾಗ ಕಛೇರಿಯಲ್ಲಿ ಸಲ್ಲಿಸಲಾಗುವದು ಎಂದು ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಅವರು ತಿಳಿಸಿದ್ದಾರೆ.